ಆ್ಯಪ್ನಗರ

ಚೌತಿಗೆ ರಂಗೇರಿದ ಬೆಳಗಾವಿ ಮಾರುಕಟ್ಟೆ

ಬೆಳಗಾವಿ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆಯೇ ಬೆಳಗಾವಿ ಮಾರುಕಟ್ಟೆ ರಂಗೇರಿದ್ದು, ನಗರದ ಪ್ರಮುಖ ವ್ಯಾಪಾರಿ ವಲಯಗಳು ...

Vijaya Karnataka 12 Sep 2018, 5:00 am
ಬೆಳಗಾವಿ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆಯೇ ಬೆಳಗಾವಿ ಮಾರುಕಟ್ಟೆ ರಂಗೇರಿದ್ದು, ನಗರದ ಪ್ರಮುಖ ವ್ಯಾಪಾರಿ ವಲಯಗಳು ಜನಜಂಗುಳಿಯಿಂದ ತುಂಬಿ ಹೋಗಿವೆ.
Vijaya Karnataka Web BEL-11BGM18


ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಮಂಟಪದಿಂದ ಹಿಡಿದು ತೋರಣ, ಪೂಜಾ ಸಾಮಗ್ರಿ, ಬಣ್ಣದ ವಿದ್ಯುತ್‌ ದೀಪಗಳು, ಅಲಂಕಾರಿಕ ಹೀಗೆ ತರಾವರಿ ವಿಶೇಷ ವಸ್ತುಗಳಿಂದ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಅದಕ್ಕೆ ತಕ್ಕನಾಗಿ ಗ್ರಾಹಕರು ದಂಡು ಬೆಳಗಾವಿಗೆ ಬರುತ್ತಿದ್ದು, ಖಡಕ್‌ಗಲ್ಲಿ, ಶನಿವಾರ ಕೂಟ, ಗಣಪತಿ ಗಲ್ಲಿ, ಕಾಕತಿವೇಸ್‌, ಮಾರುತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ್‌, ಸಮಾದೇವಿ ಗಲ್ಲಿ, ಪಾಂಗುಳ ಗಲ್ಲಿ, ಕಿರ್ಲೋಸ್ಕರ್‌ ರೋಡ್‌, ಶಹಾಪುರ ಹೀಗೆ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಜನರಿಂದ ಭರ್ತಿಯಾಗಿವೆ.

ಸೋಮವಾರ ಭಾರತ್‌ ಬಂದ್‌ ಕರೆ ಇದ್ದರಿಂದ ಗ್ರಾಮೀಣ ಭಾಗದ ಜನರು ಮಾರುಕಟ್ಟೆ ಕಡೆ ಅಷ್ಟಾಗಿ ಬಂದಿರಲಿಲ್ಲ. ನಗರದ ಗ್ರಾಹಕರಷ್ಟೇ ಮಾರುಕಟ್ಟೆಯಲ್ಲಿ ಕಂಡಿದ್ದರು. ಈಗ ಚತುರ್ಥಿಗೆ ಒಂದೇ ದಿನ ಮಾತ್ರ ಬಾಕಿ ಇರುವುದರಿಂದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಖಡೇಬಜಾರ್‌, ಗಣಪತಿ ಗಲ್ಲಿ ಸುತ್ತಲಿನ ಪ್ರದೇಶದಲ್ಲಿ ವಾಹನ ಸುಳಿದಾಡದಷ್ಟು ದಟ್ಟವಾಗಿ ಜನರ ಓಡಾಟ ನಡೆಯುತ್ತಿದೆ. ಬಟ್ಟೆ, ಅಲಂಕಾರಿಕ ವಸ್ತುಗಳ ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿವೆ.

ಬುಧವಾರದಂದು ಮಾರುಕಟ್ಟೆ ಇನ್ನಷ್ಟು ದಟ್ಟಣೆಯಿಂದ ಕೂಡುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ