ಆ್ಯಪ್ನಗರ

ಶೀಘ್ರ ಗಡಿ ದಾವೆ ಇತ್ಯರ್ಥಕ್ಕೆ ಆಗ್ರಹ

ಬೆಳಗಾವಿ:ಸುಪ್ರೀಂ ಕೋರ್ಟ್‌ನಲ್ಲಿರುವ ಗಡಿದಾವೆಯನ್ನು ಬೇಗನೇ ...

Vijaya Karnataka 14 Jan 2019, 5:00 am
ಬೆಳಗಾವಿ : ಸುಪ್ರೀಂ ಕೋರ್ಟ್‌ನಲ್ಲಿರುವ ಗಡಿದಾವೆಯನ್ನು ಬೇಗನೇ ಇತ್ಯರ್ಥಪಡಿಸಬೇಕು. ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲೇ ಸರಕಾರದ ದಾಖಲೆಗಳನ್ನು ಕೊಡಬೇಕೆಂದು ತಾಲೂಕಿನ ಕಡೋಲಿ ಗ್ರಾಮದಲ್ಲಿ ಭಾನುವಾರ ಜರುಗಿದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
Vijaya Karnataka Web BLG-1301-2-52-13RAJU-6


ಗ್ರಾಮದ ಶಿವಾಜಿ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿತವಾಗಿದ್ದ ಸಮ್ಮೇಳನದಲ್ಲಿ ಮಹಾರಾಷ್ಟ್ರದ ನಾನಾ ಕಡೆಗಳಿಂದ ಆಗಮಿಸಿದ್ದ ಸಾಹಿತಿಗಳು ಮತ್ತು ನಾಯಕರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳಲು ಮಾಡಬೇಕಿರುವ ಕೆಲಸಗಳ ಬಗ್ಗೆ ಭಾಷಣ ಮಾಡಿದರು.

ಬೆಳಗಾವಿಯ ಉದ್ಯಮಿಗಳಾದ ಅಶೋಕ ದಾನವಡೆ ಮತ್ತು ಟೋಪಣ್ಣ ಪಾಟೀಲ ಸಮ್ಮೇಳನವನ್ನು, ಚಂದಗಡದ ಉದ್ಯಮಿ ಶರದ್‌ ಪಾಟೀಲ ಪುಸ್ತಕ ಮಳಿಗೆ ಉದ್ಘಾಟನೆ ಮಾಡಿದರು. ಗ್ರಾಮದ 34ನೇ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಮಹಾರಾಷ್ಟ್ರದ ಸಾಹಿತಿ ಶೇಷರಾವ್‌ ಮೋಹಿತೆ ವಹಿಸಿದ್ದರು. ಪಲ್ಲಕ್ಕಿಯಲ್ಲಿ ಜ್ಞಾನೇಶ್ವರಿ ಗ್ರಂಥ ಮೆರವಣಿಗೆ ವಾದ್ಯಮೇಳದೊಂದಿಗೆ ನಡೆಯಿತು. ನಾಲ್ಕು ಗೋಷ್ಠಿಗಳು ಜರುಗಿದವು. ಚಿಂತಕರು, ಸರಕಾರಗಳು ರೈತಪರ ನೀತಿ ರೂಪಿಸಬೇಕು. ರೈತರ ಆತ್ಮಹತ್ಯೆಗೆ ಬೇರೆಯದೇ ರೂಪ ನೀಡಿ ಪ್ರಕರಣ ಮುಚ್ಚಿಹಾಕದೇ ಆತನ ಪರಿವಾರ ಜೀವನ ನಡೆಸಲು ಅಗತ್ಯ ನೆರವು ಕೊಡಬೇಕೆಂದು ಒತ್ತಾಯಿಸಿದರು.

ಮಹಾರಾಷ್ಟ್ರದ ಪ್ರೊ. ಬಾಲಾಜಿ ಘಾಡೆಪಾಟೀಲ ಧಾರ್ಮಿಕ ವೈಚಾರಿಕತೆ ಕುರಿತು ಉಪನ್ಯಾಸ ನೀಡಿದರು. ಭೈರವನಾಥ ಪಾಟೀಲ, ಬಿ.ಡಿ. ಮೋಹನಗೇಕರ್‌, ಪ್ರಮೀಳಾ ಪಾಟೀಲ, ಡಾ. ಅರ್ಚನಾ ಕೋಳೇಕರ್‌, ಶ್ರೀನಿವಾಸ್‌ ಕಾಲಕುಂದ್ರಿಕರ್‌, ನ್ಯಾಯವಾದಿ ಶ್ಯಾಮ್‌ ಪಾಟೀಲ, ರಾಜು ಮಾಯಣ್ಣ, ಅರುಣ ಪಾಟೀಲ, ಶುಧೀರ ಕುಟ್ರೆ, ಬಸವಂತ ಶಹಾಪುರಕರ್‌ ಒಳಗೊಂಡು ಇತರೆ ಪ್ರಮುಖರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ