ಆ್ಯಪ್ನಗರ

ಕಲ್ಲು ಸಿಡಿದು ಬಾಲಕ ಸಾವು

ಅಥಣಿ: ಪಟ್ಟಣದ ಹೊರವಲಯದ ಕಟಗೇರಿ ...

Vijaya Karnataka 20 May 2020, 5:00 am
ಅಥಣಿ: ಪಟ್ಟಣದ ಹೊರವಲಯದ ಕಟಗೇರಿ ರಸ್ತೆಯಲ್ಲಿರುವ ಸ್ಟೋನ್‌ ಕ್ರಷರ್‌ ಘಟಕದ ಆವರಣದಲ್ಲಿಮಂಗಳವಾರ ಸ್ಟೋನ್‌ ಬ್ಲಾಸ್ಟ್‌ ಮಾಡಿದ ಕಲ್ಲುಬಡಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Vijaya Karnataka Web boy dies by blasting the stone
ಕಲ್ಲು ಸಿಡಿದು ಬಾಲಕ ಸಾವು


ನಂದಗಾಂವ ಗ್ರಾಮದ ಮಹಾವೀರ ವೆಂಕಟೇಶ ನಾಗನೂರ (8) ಮೃತ ಬಾಲಕ. ವೆಂಕಟೇಶ ಅವರು ಎಂ ಸ್ಯಾಂಡ್‌ ಖರೀದಿಸಲು ಪುತ್ರ ವೆಂಕಟೇಶ್‌ ಜತೆ ಸ್ಟೋನ್‌ ಕ್ರಷರ್‌ ಘಟಕಕ್ಕೆ ತೆರಳಿದ್ದರು. ಈ ವೇಳೆ ಸ್ಟೋನ್‌ ಬ್ಲಾಸ್ಟ್‌ ಮಾಡಲಾಗುತ್ತಿತ್ತು. ಈ ವೇಳೆ ಕಲ್ಲುಸಿಡಿದು ಮಗುವಿನ ತಲೆಗೆ ಬಡಿದಿದೆ. ಸ್ಟೋನ್‌ ಕ್ರಷರ್‌ ಘಟಕದಲ್ಲಿಬ್ಲಾಸ್ಟಿಂಗ್‌ ಮಾಡುತ್ತಿದ್ದ ಕಾರ್ಮಿಕರು ಮತ್ತು ಮಾನ್ಯೇಜರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ