ಆ್ಯಪ್ನಗರ

ವಧು-ವರರ ಶೃಂಗಾರವೇ ಕಾಯಕವಾಗಿರುವ ಹೊರಕೇರಿ ಕುಟುಂಬ

ಬಿ.ಬಿ. ಕೋತೆಕರ ಯಮಕನಮರಡಿ ಮದುವೆ ಕಾರ್ಯಕ್ರಮಗಳಲ್ಲಿ ಬಾಸಿಂಗ, ತೋರಣ, ದಂಡಿಗಳ ತಯಾರಿಕೆಯ ಕಾಯಕ ನಡೆಸಿಕೊಂಡು ...

Vijaya Karnataka 11 Feb 2019, 5:00 am
ಬಿ.ಬಿ.ಕೋತೆಕರ ಯಮಕನಮರಡಿ
Vijaya Karnataka Web BEL-10YMD1

ಮದುವೆ ಕಾರ್ಯಕ್ರಮಗಳಲ್ಲಿ ಬಾಸಿಂಗ, ತೋರಣ, ದಂಡಿಗಳ ತಯಾರಿಕೆಯ ಕಾಯಕ ನಡೆಸಿಕೊಂಡು ಬಂದಿರುವ ಹುಕ್ಕೇರಿ ತಾಲೂಕಿನ ಯಮಕನಮರಡಿ ನಿವಾಸಿ ಸೋಮ ಹೊರಕೇರಿಯವರ ಕುಟುಂಬ ಈ ಕಾಯಕದಲ್ಲಿ ಈ ಭಾಗದಲ್ಲಿ ಮನೆಮಾತಾಗಿದೆ.

ಬಾಳಯ್ಯಾ ಅಜ್ಜನ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಸಂದರ್ಭದಲ್ಲಿ 25 ಜೋಡಿ ನವದಂಪತಿಗಳಿಗೆ ಬಾಸಿಂಗ ತೋರಣ, ದಂಡಿ ನೀಡಿದ್ದಾರೆ.

ಅತಿ ಪೂರ್ವಜರ ಕಾಲದಿಂದಲೂ ಹೊರಕೇರಿ ಕುಟುಂಬದವರು ಮದುವೆ ಸಮಾರಂಭ, ಹೊಸ ಮನೆ ಕಟ್ಟಡಕ್ಕೆ ಅವಶ್ಯವಾಗಿ ಬೇಕಾಗಿರುವ ಬಾಸಿಂಗ, ದಂಡಿ, ತೋರಣ ಇವುಗಳನ್ನು ತಮ್ಮ ಕೈಚಳದಿಂದ ಸಿದ್ಧಪಡಿಸಿ ಮದುವೆ ಸಮಾರಂಭಗಳಲ್ಲಿ ಯಮಕನಮರಡಿ ಸುತ್ತಲಿನ ಗ್ರಾಮೀಣ ಭಾಗ ಹಳ್ಳಿಯ ಜನರು ಈ ಗ್ರಾಮಕ್ಕೆ ಬಂದ ತಮ್ಮ ಬಾಸಿಂಗ, ತೋರಣ ತೂಗಿಕೊಂಡು ಇಂದಿಗೂ ಹೋಗುತ್ತಿದೆ. ಈ ಕುಟುಂಬ ಈವರೆಗೆ ಸುಮಾರು 50 ಸಾವಿರ ವಧು-ವರರಿಗೆ ಬಾಸಿಂಗ, ದಂಡಿ ತಯಾರಿಸಿಕೊಟ್ಟಿದೆ.

ಹುಕ್ಕೇರಿ ತಾಲೂಕಿನ ಶಹಾಬಂದರ ಬಳಿ ಇರುವ ಈ ಕಾರ್ಯಕ್ರಮವು ವರ್ಷದಲ್ಲಿ ಮೂರು ತಿಂಗಳ ಮಾತ್ರ ನಡೆಯುತ್ತಿದೆ. 3 ತಲೆಮಾರಿನಿಂದ ಬಂದ ಈ ಕಾಯಕದಲ್ಲಿ ಇಡಿ ಕುಟುಂಬವನ್ನು ವರ್ಷಪೂರ್ತಿಯಾಗಿ ಜೀವನ ನಡೆಸುವುದು ಚಿಂತಾಜನಕವಾಗಿದೆ. ಈ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದರೂ ಕೂಡ ಹುಕ್ಕೇರಿ ತಾಲೂಕಿನ ಹಲವಾರು ಗ್ರಾಮದಲ್ಲಿ ನಡೆಯುವ ಅನೇಕ ಸಾಮೂಹಿಕ ಮದುವೆ ಸಮಾರಂಭದಲ್ಲಿ ನೂತನ ವಧು-ವರರಿಗೆ ಉಚಿತವಾಗಿ ಬಾಸಿಂಗಗಳನ್ನು ಸಲ್ಲಿಸುತ್ತಿದ್ದು ಒಂದು ಹೆಮ್ಮೆ ಸಂಗತಿ. ಅನೇಕ ಮಠಾಧೀಶರು ಇವರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾಯಕ ಮಾಡುತ್ತಾ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷ ಣವನ್ನು ಒದಗಿಸಿದ್ದಾರೆ. ಇಂತಹ ನೂರಾರು ಕುಟುಂಬಗಳಿಗೆ ಸರಕಾರ ಇಂತಹ ಕಾರ್ಯಕವನ್ನು ಗುರುತಿಸಿ ಎಚ್ಚೆತ್ತುಕೊಂಡು ಸಹಾಯಹಸ್ತ ಮಾಡುವ ಕಾರ್ಯ ನಡೆಯಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ