ಆ್ಯಪ್ನಗರ

ಕಗ್ಗಂಟಾಗಿ ಉಳಿದ ಬುಡಾ ಸ್ಕೀಂ ನಂ. 61

ಬೆಳಗಾವಿ: ಬೆಳೆಯುತ್ತಿರುವ ಬೆಳಗಾವಿ ನಗರಕ್ಕೆ ...

Vijaya Karnataka 20 Dec 2019, 5:00 am
ಬೆಳಗಾವಿ: ಬೆಳೆಯುತ್ತಿರುವ ಬೆಳಗಾವಿ ನಗರಕ್ಕೆ ನಿವೇಶನಗಳ ಅವಕಾಶ ಮಾಡಿಕೊಡಲು ಬುಡಾ ಕಣಬರಗಿ ಪ್ರದೇಶದಲ್ಲಿಕೈಗೆತ್ತಿಕೊಂಡಿರುವ ಸ್ಕೀಮ್‌ ನಂ. 61ರ ಭೂಸ್ವಾಧೀನ ಸಮಸ್ಯೆಗಳು ಬಿಡಿಸಿದಷ್ಟು ಕಗ್ಗಂಟಾಗುತ್ತಿದ್ದು, ಇದು ನಿವೇಶನ ಆಕಾಂಕ್ಷಿಗಳಲ್ಲಿನಿರಾಸೆ ಮೂಡಿಸಿದೆ.
Vijaya Karnataka Web 19RAJU-1060815
ರೈತರು ಬುಡಾ ಎದುರು ಧರಣಿ ನಡೆಸುತ್ತಿರುವುದು.


ದಶಕದ ಹಿಂದೆಯೇ ಕೈಗೊತ್ತಿಕೊಂಡಿರುವ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲು ಆಡಳಿತ ಶತಪ್ರಯತ್ನ ನಡೆಸಿದ್ದರೂ, ಜಮೀನು ಮಾಲೀಕರ ತಕರಾರು ಮುಗಿಯುತ್ತಿಲ್ಲ. ಬುಧವಾರ ರೈತ ಸಂಘಟನೆಯವರು ಅಹೋರಾತ್ರಿ ಧರಣಿ ನಡೆಸಿ ಭೂಸ್ವಾಧೀನ ಮತ್ತು ನಿವೇಶನ ವಿನ್ಯಾಸ ಕೈಬಿಡಬೇಕು. ಜತೆಗೆ ಈ ಮಾರ್ಗದಲ್ಲಿಬಾಂಡ್‌ಪೇಪರ್‌ ಆಧರಿಸಿ ನಿರ್ಮಾಣವಾಗಿರುವ ನೂರಾರು ಮನೆಗಳನ್ನು ಸಕ್ರಮಗೊಳಿಸಿ ಸೌಲಭ್ಯ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇದು ಆಡಳಿತಕ್ಕೆ ಮತ್ತಷ್ಟು ತಲೆಬಿಸಿ ತಂದಿದ್ದು, ಬುಡಾದ ಮುಂದಿನ ಸಾಮಾನ್ಯ ಸಭೆಯಲ್ಲಿಈ ಬಗ್ಗೆ ಗಮನ ಸೆಳೆಯುವುದಾಗಿ ಹೇಳಿ ಗುರುವಾರ ಕಳುಹಿಸಿಕೊಟ್ಟಿದೆ.

ಏತನ್ಮಧ್ಯೆ ಆಡಳಿತ ಶೇ. 50/50 ಮಾದರಿಯಲ್ಲಿನಿವೇಶನ ಹಂಚಿಕೊಳ್ಳಲು ಒಪ್ಪಿಕೊಂಡಿರುವ ರೈತರ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡು ಪರಿವರ್ತಿತ ವಿನ್ಯಾಸ ನಕ್ಷೆ ತಯಾರಿಸಲು ಸಿದ್ಧತೆ ನಡೆಸಿದೆ. ಇಲ್ಲಿ157 ಎಕರೆಗೂ ಅಧಿಕ ಜಮೀನು ಸ್ವಾಧೀನಕ್ಕೆ ಬರಬೇಕಿದ್ದು, ಇದರಲ್ಲಿ110 ಎಕರೆಗೂ ಹೆಚ್ಚಿನ ಜಮೀನು ಬುಡಾದ ಅಧೀನದಲ್ಲಿದೆ. ನ್ಯಾಯಾಲಯದ ಕಟ್ಟೆ ಹತ್ತಿದವರ ಜಮೀನಿಗೆ ಸಂಬಂಧಿಸಿದವರಲ್ಲೂಕೆಲವರು ತಮ್ಮ ಪಾಲಿನ ಜಮೀನು ಕೊಡಲು ಸಮ್ಮತಿಸಿದ್ದಾರೆ. ಆದರೆ, ಇವರ ಜಮೀನು ಕುಟುಂಬದಿಂದ ವಾಟಣಿ ಆಗಿಲ್ಲವಾಲ್ಲ. ಇದನ್ನೂ ಬೇರ್ಪಡಿಸಿ ಬಿಡಿಸಿಕೊಳ್ಳಲು ಬುಡಾ ಪ್ರಯತ್ನ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ