ಆ್ಯಪ್ನಗರ

ಸರಿಯಾದ ಸಮಯಕ್ಕೆ ಶಾಲೆಗೆ ಬಾರದ ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ

ಬೈಲಹೊಂಗಲ: ತಾಲೂಕಿನ ಲಕ್ಕುಂಡಿ ಗ್ರಾಮದ ...

Vijaya Karnataka 22 Nov 2019, 5:00 am
ಬೈಲಹೊಂಗಲ: ತಾಲೂಕಿನ ಲಕ್ಕುಂಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿಮೂಲ ಸೌಕರ್ಯದ ಕೊರತೆಯಿದೆ. ಶಾಲೆಯ ಮುಖ್ಯಶಿಕ್ಷಕರು ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web call for action against head teachers who do not attend school at the right time
ಸರಿಯಾದ ಸಮಯಕ್ಕೆ ಶಾಲೆಗೆ ಬಾರದ ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ


ಲಕ್ಕುಂಡಿ ಗ್ರಾಮದ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರು ಪ್ರತಿದಿನ ಬೆಳಗ್ಗೆ 11 ಗಂಟೆಗೆ ಶಾಲೆಗೆ ಬಂದು 1.30 ಕ್ಕೆ ಹೋಗುತ್ತಾರೆ. ಇದರಿಂದಾಗಿ ಶಾಲೆ ವ್ಯವಸ್ಥೆ ಹದಗೆಟ್ಟಿದೆ. ಶಾಲಾ ಮಕ್ಕಳ ಶೂ, ಸಮವಸ್ತ್ರ, ಪೇಪರ್‌, ಚಾಕ್‌ಪೀಸ್‌, ಕ್ರೀಡಾ ವಸ್ತುಗಳನ್ನು ಸರಿಯಾಗಿ ಪೂರೈಕೆ ಮಾಡಿಲ್ಲ. ಶಾಲಾ ಕಚೇರಿ, ಶೌಚಾಲಯ ಹದಗೆಟ್ಟಿದೆ. ಬಿಇಒ ಅವರಿಗೆ 2 ವರ್ಷಗಳಿಂದ ಈ ಕುರಿತು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಶಾಲೆ ಸುಧಾರಣೆಗೆ ಪ್ರಯತ್ನಿಸಿ, ಮುಖಖ್ಯಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.

ಈ ವೇಳೆ ಗುರುಶಾಂತಯ್ಯಾ ಗಾಳಿಮರಡಿ, ಅಂಕುಶ ಚಿಕ್ಕಮಠ, ಮಂಜುನಾಥ ಮಠದ, ಸಂಜಯಗೌಡ ಪಾಟೀಲ, ಈರಯ್ಯ ಚಿಕ್ಕಮಠ, ಈರಪ್ಪ ತೊಟಗಿ, ಉಳವಪ್ಪ ಸುಣಧೋಳಿ, ವೀರುಪಾಕ್ಷ ಹೂಗಾರ, ಮಂಜು ಸುಣದೋಳಿ, ಈರಣ್ಣ ಮಿಂಡೊಳ್ಳಿ, ಮಂಜು ಕಾಟಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ