ಆ್ಯಪ್ನಗರ

ಟೈರ್‌ ಸಿಡಿದು ಕಾರು ಪಲ್ಟಿ: ಚಾಲಕ ಸಾವು

ಅಗಸಗಿ (ಬೆಳಗಾವಿ): ಸಮೀಪದ ಹೊನಗಾ-ಬೆನ್ನಾಳಿ ಬ್ರಿಜ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ...

Vijaya Karnataka 29 Mar 2019, 5:00 am
ಅಗಸಗಿ (ಬೆಳಗಾವಿ): ಸಮೀಪದ ಹೊನಗಾ-ಬೆನ್ನಾಳಿ ಬ್ರಿಜ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದ ಕಾರೊಂದು ಟೈರ್‌ ಸಿಡಿದು ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟಿದ್ದಾರೆ.
Vijaya Karnataka Web BLG-2803-2-52-28AGASAGI


ಹುಬ್ಬಳ್ಳಿಯ ಮರಾಠಾ ಗಲ್ಲಿ ನಿವಾಸಿ ಅಜಯ್‌ ಗುರುನಾಥ ಗುತಕೇಕರ (40) ಮೃತರು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವೇಗವಾಗಿ ಚಲಿಸುತ್ತಿದ್ದ ಇವರ ಕಾರಿನ ಟೈರ್‌ ಸಿಡಿದ ಪರಿಣಾಮ ಹೆದ್ದಾರಿಯಿಂದ 500ಕ್ಕೂ ಹೆಚ್ಚು ಅಡಿ ದೂರವಿರುವ ಹೊಲದಲ್ಲಿ ಕಾರು ಉರುಳಿ ಬಿದ್ದಿದೆ.

ಕಾರಿನಲ್ಲಿ ಇವರೊಬ್ಬರೇ ಪ್ರಯಾಣಿಸುತ್ತಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ