ಬೆಳಗಾವಿ: ಸವದತ್ತಿ ಪಟ್ಟಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತಂಬಾಕು ಮಾರಾಟ ಮಾಡುವ 43 ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿವೆ. ಸವದತ್ತಿ ತಾಲೂಕಿನ ಆರೋಗ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ, ಹಿರಿಯ ಆರೋಗ್ಯ ಸಹಾಯಕ ಬಿ.ಎ. ಶೆಟ್ಟೆಪನ್ನವರ, ಕಿರಿಯ ಆರೋಗ್ಯ ಸಹಾಯಕ ಅಶೋಕ ಮುರಗೋಡ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಶ್ವೇತಾ ಪಾಟೀಲ, ಕವಿತಾ ರಾಜನ್ನವರ ಕಾರ್ಯಾಚರಣೆಯಲ್ಲಿದ್ದರು.
43 ಅಂಗಡಿಗಳ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ: ಸವದತ್ತಿ ಪಟ್ಟಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ...
Vijaya Karnataka 7 Feb 2019, 5:00 am