ಆ್ಯಪ್ನಗರ

ಪ್ರವಾಸಿ ತಾಣವಾಗಿ ಚನ್ನಮ್ಮನ ಸಮಾಧಿ: ಎಸಿ ಭರವಸೆ

ಬೈಲಹೊಂಗಲ: ಲೋಕಸಭಾ ಚುನಾವಣೆ ನಿಮಿತ್ತ ಗದಗ ನಗರಕ್ಕೆ ವರ್ಗವಾಗಿದ್ದ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಮರಳಿ ಬೈಲಹೊಂಗಲ ಉಪವಿಭಾಗಕ್ಕೆ ನೇಮಕಗೊಂಡು ...

Vijaya Karnataka 21 Jun 2019, 5:00 am
ಬೈಲಹೊಂಗಲ: ಲೋಕಸಭಾ ಚುನಾವಣೆ ನಿಮಿತ್ತ ಗದಗ ನಗರಕ್ಕೆ ವರ್ಗವಾಗಿದ್ದ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಮರಳಿ ಬೈಲಹೊಂಗಲ ಉಪವಿಭಾಗಕ್ಕೆ ನೇಮಕಗೊಂಡು ಅಧಿಕಾರ ಸ್ವೀಕರಿಸಿದರು.
Vijaya Karnataka Web BEL-20HTP9   SHIVANAND BAJANTRI


ನಂತರ ವಿಜಯ ಕರ್ನಾಟಕ ಪತ್ರಿಕೆ ಜತೆ ಮಾತನಾಡಿದ ಅವರು, ''ಬೈಲಹೊಂಗಲ ಪಟ್ಟಣದ ಹೃದಯ ಭಾಗದಲ್ಲಿರುವ ವೀರ ರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಹಾಗೂ ಉದ್ಯಾನವನದ ಸಮಗ್ರ ಅಭಿವೃದ್ಧಿಯನ್ನು ಈಗಾಗಲೇ ಮಾಡುತ್ತಿದ್ದು, ಅದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗುವುದು. ಜತೆಗೆ ಕಿತ್ತೂರು ಚನ್ನಮ್ಮನ ಶೌರ್ಯ, ದೇಶಾಭಿಮಾನ, ಸಂಸ್ಕೃತಿ-ಸಂಸ್ಕಾರ ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನೂ ಮಾಡಲಾಗುವುದು. ರೈತರ ಬ್ಯಾಂಕ್‌ ಖಾತೆಗಳಿಗೆ ಪ್ರತಿ ವರ್ಷ 6 ಸಾವಿರ ರೂ. ಜಮೆ ಮಾಡುವ ಯೋಜನೆ ನಿಮಿತ್ತ ಪ್ರಸ್ತುತ 2 ಸಾವಿರ ರೂ. ಜಮೆ ಮಾಡಲಾಗುತ್ತಿದೆ'', ಎಂದರು.

ಕುಡುಕರ ಹಾವಳಿ, ಪರಿಸರ ದಿವಾಳಿ ಎಂಬ 'ವಿಕ' ಪ್ರಕಟಿಸಿದ ಲೇಖನ ಕುರಿತು ಪ್ರಶ್ನಿಸಿದಾಗ, ಪೊಲೀಸ್‌ ಇಲಾಖೆಯ ಗಮನಕ್ಕೆ ತಂದು ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆ ಮೈದಾನ, ಹೊಸೂರ ರಸ್ತೆ, ಮುರಗೋಡ ರಸ್ತೆ, ಇಂಚಲ ರಸ್ತೆ ಪಕ್ಕದ ಜಮೀನುಗಳಲ್ಲಿ ಮದ್ಯ ಸೇವಿಸುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. ಪಟ್ಟಣದ ಬಜಾರ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ, ರಸ್ತೆ ಡಾಂಬರೀಕರಣ ಹಾಗೂ ಪ್ರಮುಖ ರಸ್ತೆಗಳಲ್ಲಿ ಧೂಳಿನ ಸಮಸ್ಯೆ ಕುರಿತು ಗಮನ ಸೆಳೆದಾಗ, ಟ್ರಾಫಿಕ್‌ ಸಮಸ್ಯೆ, ಬಜಾರ ರಸ್ತೆ ಡಾಂಬರೀಕರಣ, ಧೂಳಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪವಿಭಾಗಾಧಿಕಾರಿ ಎಂ.ಪಿ.ಮಾರುತಿ ಅವರು ಬಾಗಲಕೋಟಕ್ಕೆ ವಿಶೇಷ ಭೂಸ್ವಾಧೀನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ