ಆ್ಯಪ್ನಗರ

ಬೆಳಗಾವಿ: ಪಟಾಕಿ ಸಿಡಿತ, ರಥಕ್ಕೆ ಬೆಂಕಿ

ತೇರು ಎಳೆದು ತಂದು ನಿಲ್ಲಿಸಿದ ಮೇಲೆ ಪಟಾಕಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಪಟಾಕಿಯ ಕಿಡಿ ರಥಕ್ಕೆ ಕಟ್ಟಿದ ಬಟ್ಟೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಜನ ಬೆಂಕಿ ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ರಥೋತ್ಸವ ಸಾಂಗವಾಗಿ ಮುಗಿದ ನಂತರ ಈ ಘಟನೆ ನಡೆದಿದೆ.

Vijaya Karnataka Web 28 Dec 2021, 10:28 pm
ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮದಲ್ಲಿ ಮಂಗಳವಾರ ಸಂಜೆ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ವೇಳೆ ಪಟಾಕಿ ಕಿಡಿ ಸಿಡಿದು ರಥಕ್ಕೆ ಬೆಂಕಿ ಹೊತ್ತಿ ಉರಿದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ.
Vijaya Karnataka Web ರಥ
ರಥ


ತೇರು ಎಳೆದು ತಂದು ನಿಲ್ಲಿಸಿದ ಮೇಲೆ ಪಟಾಕಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಪಟಾಕಿಯ ಕಿಡಿ ರಥಕ್ಕೆ ಕಟ್ಟಿದ ಬಟ್ಟೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಜನ ಬೆಂಕಿ ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ರಥೋತ್ಸವ ಸಾಂಗವಾಗಿ ಮುಗಿದ ನಂತರ ಈ ಘಟನೆ ನಡೆದಿದೆ.

ಹೆದ್ದಾರಿ ಜಂಕ್ಷನ್‌ಗೆ ಮರ ಬಲಿಗೆ ವಿರೋಧ

ಜಾಂಬೋಟಿ- ರಬಕವಿ ಹೆದ್ದಾರಿಯ ಜಂಕ್ಷನ್‌ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಮುಂದಾಗಿರುವುದು ಪರಿಸರ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಖಾನಾಪುರ ತಾಲೂಕಿನ ಜಾಂಬೋಟಿ - ರಬಕವಿ ಹೆದ್ದಾರಿ ಮತ್ತು ಜತ್ತ - ಜಾಂಬೋಟಿ ಹೆದ್ದಾರಿಗೆ ರಸ್ತೆ ಅಭಿವೃದ್ಧಿಪಡಿಸುತ್ತಿದ್ದು, ಈ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸಲು ಖಾನಾಪುರ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಉದ್ದೇಶಿತ ರಸ್ತೆ ಜಂಕ್ಷನ್‌ ಕಾಮಗಾರಿ ಪ್ರದೇಶದಲ್ಲಿ95 ಮರಗಳಿವೆ, ಇದರಲ್ಲಿ13 ಬೆಲೆಬಾಳುವ ಸೀಸಂ ಮರಗಳಾಗಿದ್ದರೆ 82 ಜಂಗ್ಲಿಜಾತಿಯ ಮರಗಳಾಗಿವೆ. ಈಗಾಗಲೇ ಬೆಳಗಾವಿ - ಗೋವಾ ಹೆದ್ದಾರಿ ಅಭಿವೃದ್ಧಿಗಾಗಿ ಖಾನಾಪುರ ಭಾಗದಲ್ಲಿಸಾವಿರಾರು ಮರಗಳನ್ನು ಕಡಿಯಲಾಗಿದೆ. ಇಲ್ಲಿನ ದಟ್ಟಾರಣ್ಯ ಪ್ರದೇಶವು ಅಭಿವೃದ್ಧಿಯ ಹೆಸರಿನಲ್ಲಿಬರಿದಾಗುತ್ತಿದೆ. ಮತ್ತೆ ಇದೇ ಭಾಗದಲ್ಲಿಕೇವಲ ರಸ್ತೆ ವೃತ್ತದ ಸೌಂದರ್ಯ ಹೆಚ್ಚಿಸಲು ಮರಗಳನ್ನು ಬಲಿ ಪಡೆಯುತ್ತಿರುವುದು ಪರಿಸರಕ್ಕೆ ಮಾರಕವಾಗುತ್ತದೆ ಎಂಬುದು ಪರಿಸರ ಪ್ರಿಯರ ಆರೋಪ.

ಅಹವಾಲು ಸಲ್ಲಿಸಲು ಅವಕಾಶ

ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಅಪಾಯಕಾರಿಯಾಗಿರುವ ಮರಗಳು 50 ಕ್ಕಿಂತ ಜಾಸ್ತಿಯಾಗಿರುವುದರಿಂದ ಕರ್ನಾಟಕ ಮರಗಳ ಕಾಯ್ದೆ 1976 ರ ನಿಯಮ 8 (3) ರ ಪ್ರಕಾರ ಪಬ್ಲಿಕ್‌ ಡಾಮಿನ್‌ನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಅಹವಾಲು ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಅಹವಾಲುಗಳಿದ್ದಲ್ಲಿ 2022ರ ಜನವರಿ 5 ರ ಒಳಗಾಗಿ ಸಲ್ಲಿಸಬಹುದು ಎಂದು ಖಾನಾಪುರ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ