ಆ್ಯಪ್ನಗರ

ಚಿಕ್ಕೋಡಿ: ಜ.8ರಂದು ಸಿಐಟಿಯುನಿಂದ ಪ್ರತಿಭಟನೆ

ಚಿಕ್ಕೋಡಿ: ಕೇಂದ್ರ ಸರಕಾರದ ರೈತ, ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ಜ...

Vijaya Karnataka 6 Jan 2019, 5:00 am
ಚಿಕ್ಕೋಡಿ : ಕೇಂದ್ರ ಸರಕಾರದ ರೈತ, ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ಜ. 8 ಮತ್ತು 9 ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟೇಡ್‌ ಯೂನಿಯನ್ಸ್‌ ಚಿಕ್ಕೋಡಿ ತಾಲೂಕು ಸಮಿತಿ ಅಧ್ಯಕ್ಷ ಟಿ.ಎ. ಭಬಗೌಡ ತಿಳಿಸಿದ್ದಾರೆ.
Vijaya Karnataka Web chikkodi citu protest on 8th
ಚಿಕ್ಕೋಡಿ: ಜ.8ರಂದು ಸಿಐಟಿಯುನಿಂದ ಪ್ರತಿಭಟನೆ


ಮುಷ್ಕರದಲ್ಲಿ ಅಸಂಘಟಿತ ಕಾರ್ಮಿಕರಾದ ಹಮಾಲಿ, ಪಂಚಾಯತ್‌ ನೌಕರರು, ಬೀಡಿ ಕಾರ್ಮಿಕರು, ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು, ಅಟೋ ರಿಕ್ಷಾ ಕಾರ್ಮಿಕರು, ಕೆಎಸ್‌ಆರ್‌ಟಿಸಿ ನೌಕರರು, ಪೌರ ಕಾರ್ಮಿಕರು, ಎಲ್‌ಐಸಿ ನೌಕರರು, ವಿದ್ಯುತ್‌ ಗುತ್ತಿಗೆ ನೌಕರರು, ರಕ್ಷ ಣಾ ವೇದಿಕೆ ಕಾರ್ಯಕರ್ತರು, ರೈತರು ಹಾಗೂ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ಇನ್ನಿತರ ಕಾರ್ಮಿಕರು ಭಾಗವಹಿಸಲಿದ್ದಾರೆ.

ಜ. 8 ರಂದು ಬೆಳಗ್ಗೆ 10ಕ್ಕೆ ಸರಕಾರಿ ನೌಕರರ ಭವನದಿಂದ ಬಸ್‌ ನಿಲ್ದಾಣ, ಕೆಸಿ ರಸ್ತೆ, ಅಂಕಲಿ ಖೂಟ, ಸೋಮವಾರ ಪೇಟ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯು ಬಸವ ಸರ್ಕಲ್‌ನಿಂದ ತಹಸೀಲ್ದಾರ್‌ ಕಾರ್ಯಾಲಯಕ್ಕೆ ತೆರಳಲಿದೆ. ತಹಶೀಲ್ದಾರ ಕಚೇರಿ ಎದುರು ಎರಡು ದಿನಗಳ ಕಾಲ ಪ್ರತಿಭಟನೆ ನಡೆಯಲಿದೆ ಅವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ