ಆ್ಯಪ್ನಗರ

ಆ.15ರೊಳಗೆ ಚಿಕ್ಕೋಡಿ ಜಿಲ್ಲೆ ಘೋಷಣೆಯಾಗದಿದ್ದರೆ ಆಮರಣಾಂತ ನಿರಶನ

ಚಿಕ್ಕೋಡಿ ಭಾಗದ ಸರ್ವ ಪಕ್ಷದ ನಾಯಕರು ಪಕ್ಷಬೇಧ ಮರೆತು ಸಿಎಂ ಮೇಲೆ ಒತ್ತಡ ತಂದು ಆ15ರೊಳಗೆ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿಸಬೇಕು...

Vijaya Karnataka 7 Jul 2018, 5:00 am
ಚಿಕ್ಕೋಡಿ: ಚಿಕ್ಕೋಡಿ ಭಾಗದ ಸರ್ವ ಪಕ್ಷದ ನಾಯಕರು ಪಕ್ಷಬೇಧ ಮರೆತು ಸಿಎಂ ಮೇಲೆ ಒತ್ತಡ ತಂದು ಆ.15ರೊಳಗೆ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿಸಬೇಕು. ಇಲ್ಲವಾದಲ್ಲಿ ಆ.16ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್‌. ಸಂಗಪ್ಪಗೋಳ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web BEL-6CKD1


ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚಿಕ್ಕೋಡಿ ಜಿಲ್ಲೆಗಾಗಿ ಬಹುದಿನಗಳಿಂದ ಹೋರಾಟ ನಡೆಯುತ್ತಿದೆ. ದೊಡ್ಡ ಜಿಲ್ಲೆ ವಿಭಜನೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಯಾಗಬೇಕು ಎಂದ ಶಾಸಕ ಸತೀಶ ಜಾರಕಿಹೊಳಿ ಅವರ ಅಭಿಮತಗಳು ಸ್ವಾಗತಾರ್ಹ. ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮತ್ತಿತರ ಪಕ್ಷದ ಮುಖಂಡರನ್ನೊಳಗೊಂಡ ಸರ್ವ ಪಕ್ಷ ನಿಯೋಗ ತೆರಳಿ ಸಿಎಂ ಮೇಲೆ ಈ ಕುರಿತು ಒತ್ತಡ ಹೇರಬೇಕು.

ಬಜೆಟ್‌ನಲ್ಲಿ ಉಕ ಭಾಗಕ್ಕೆ ಅನ್ಯಾಯ: ಪ್ರಸಕ್ತ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಬಡ ಜನರಿಗೆ ಮುಟ್ಟುವಂತಹ ಯಾವೊಂದು ಸಾಮಾನ್ಯ ಕಾರ್ಯಕ್ರಮ ಬಜೆಟ್‌ನಲ್ಲಿಲ್ಲ. ಈಗಲಾದರೂ ಈ ಭಾಗದ ಶಾಸಕರು ಮತ್ತು ಸಚಿವರು ಈ ಭಾಗಕ್ಕೆ ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ವೈದ್ಯಕೀಯ ಕಾಲೇಜು ಮತ್ತಿತರ ಯೋಜನೆ ತರಲು ಪ್ರಯತ್ನಿಸಬೇಕು. ಜಿಲ್ಲಾ ವಿಭಜನೆಗೆ ಮತ್ತು ಹೊಸ ತಾಲೂಕು ಘೋಷಣೆಗೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಜು ಬಡಿಗೇರ, ತುಕಾರಾಮ ಕೋಳಿ, ಸುರೇಶ ಬ್ಯಾಕೂಡೆ, ಅಪ್ಪಾಸಾಬ ಪಾಟೀಲ, ದೊಂಡಿಬಾ ಹಕ್ಯಾಗೋಳ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ