ಆ್ಯಪ್ನಗರ

ಚಿಂಚಲಿ: ಅನಧಿಕೃತ ಗೈರಾದ ಮುಖ್ಯ ಶಿಕ್ಷಕರ ಪ್ರಭಾರಿ ಹುದ್ದೆಗೆ ಕತ್ತರಿ

ಚಿಂಚಲಿ : ಪಟ್ಟಣದ ಸರಕಾರಿ ಹಿರಿಯ ಗಂಡು ಮಕ್ಕಳ ಮಾದರಿ ಶಾಲೆಗೆ ಶುಕ್ರವಾರ ರಾಯಬಾಗ ತಾಲೂಕು ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌ಎ...

Vijaya Karnataka Web 29 Jun 2019, 5:00 am
ಚಿಂಚಲಿ: ಪಟ್ಟಣದ ಸರಕಾರಿ ಹಿರಿಯ ಗಂಡು ಮಕ್ಕಳ ಮಾದರಿ ಶಾಲೆಗೆ ಶುಕ್ರವಾರ ರಾಯಬಾಗ ತಾಲೂಕು ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌.ಎ. ಭಜಂತ್ರಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web BLG-2806-2-52-28CHINCHALI 1


ಪರಿಶೀಲನೆ ಸಮಯದಲ್ಲಿ ಪ್ರಭಾರಿ ಮುಖ್ಯ ಶಿಕ್ಷ ಕ ಸುರೇಶ ಎಂ. ಅವರು ಅನಧಿಕೃತ ಗೈರಾಗಿದ್ದರಿಂದ ಮತ್ತು ಕಾರ್ಯವೈಖರಿ ಸರಿ ಇಲ್ಲವೆಂಬ ಆರೋಪದ ಕಾರಣ ಅವರ ಹತ್ತಿರವಿದ್ದ ಪ್ರಭಾರಿ ಮುಖ್ಯ ಶಿಕ್ಷ ಕ ಹುದ್ದೆಯನ್ನು ಶಾಲೆ ಶಿಕ್ಷ ಕ ಎಸ್‌.ಪಿ. ಕಂಕಣವಾಡಿಯವರಿಗೆ ವಹಿಸಿದರು.

ಶಾಲೆಯಲ್ಲಿ ಗುಣಮಟ್ಟದ ಶಿಕ್ಷ ಣ, ಮಕ್ಕಳ ಸುರಕ್ಷ ತೆ, ನಿಯಮಾನುಸಾರ ಹಾಜರಾತಿ, ದಾಖಲಾತಿ ವಹಿಗಳ ನಿರ್ವಹಣೆ ಮಾಡಲು ತಿಳಿಸಿದ ಅವರು, ಗೈರು ಉಳಿದ ಶಿಕ್ಷ ಕರ ಕುರಿತು ಮಾಹಿತಿಯನ್ನು ಕಚೇರಿಗೆ ಸಲ್ಲಿಸುವಂತೆ ಆದೇಶಿಸಿದರು.

ಬಳಿಕ ಶಾಲೆ ಹಿಂದೆ ನಿರ್ಮಿಸುತ್ತಿರುವ ಹೊಸ ಕಟ್ಟಡ ಪರಿಶೀಲಿಸಿದ ಅವರು, ಕಾರ್ಮಿಕರ ನಿಯಮ ಪಾಲನೆಯೊಂದಿಗೆ, ನಿಗದಿತ ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನು ಉಪಯೋಗಿಸಿ ಕಟ್ಟಡ ನಿರ್ಮಿಸಬೇಕೆಂದು ಸೂಚಿಸಿದರು.

ಶಿಕ್ಷ ಣ ಸಂಯೋಜಕ ಎಚ್‌.ಬಿ. ಬೇನಾಡಿ, ಸಿಆರ್‌ಪಿ ಸುಲ್ತಾನ್‌ಭಾಯಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಹಿಪಾಲ ಐಹೊಳೆ, ಕೆಜಿಎಸ್‌ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅನಿಲ ಮೈಶಾಳೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ