ಆ್ಯಪ್ನಗರ

ಬೆಳಗಾವಿಯ ವಿಷ್ಣುಗಲ್ಲಿ ಕಾಲರಾಪೀಡಿತ

ವಿಷ್ಣುಗಲ್ಲಿ ಕಾಲರಾಪೀಡಿತ - ಜಿಲ್ಲಾಡಳಿತ ಘೋಷಣೆ - ಕಾಯಿಲೆಗೆ ಕಂಗಾಲಾದ ಬೆಳಗಾವಿ ವಿಕ ಸುದ್ದಿಲೋಕ ಬೆಳಗಾವಿ ಸ್ಮಾರ್ಟ್‌ ಸಿಟಿಯಾಗಿ ರೂಪಾಂತರಗೊಳ್ಳುತ್ತಿರುವ ಬೆಳಗಾವಿ ...

ವಿಕ ಸುದ್ದಿಲೋಕ 25 Jun 2016, 5:00 am

ಬೆಳಗಾವಿ: ಸ್ಮಾರ್ಟ್‌ ಸಿಟಿಯಾಗಿ ರೂಪಾಂತರಗೊಳ್ಳುತ್ತಿರುವ ಬೆಳಗಾವಿ ನಗರದಲ್ಲಿ ಕಾಲರಾ ರೋಗ ದಿನದಿಂದ ದಿನಕ್ಕೆ ವಿಸ್ತರಣೆಗೊಳ್ಳುತ್ತಿರುವುದು ಸವಾಲಾಗಿ ಪರಿಣಮಿಸಿದೆ.

ಈಗಾಗಲೆ ಬಿಜಗರ್ಣಿ ಮತ್ತು ಶಾಸ್ತ್ರೀನಗರ ಪ್ರದೇಶಗಳನ್ನು ಕಾಲರಾ ಪೀಡಿತ ಎಂದು ಘೋಷಣೆ ಮಾಡಿರುವ ಜಿಲ್ಲಾಡಳಿತ ಶುಕ್ರವಾರ ವಡಗಾವಿಯ ವಿಷ್ಣು ಗಲ್ಲಿ ಪ್ರದೇಶವನ್ನೂ ಕಾಲರಾ ಪೀಡಿತ ಎಂದು ಘೋಷಿಸಿದೆ. ಕಾಲರಾ ರೋಗಕ್ಕೆ ಕುಡಿಯುವ ನೀರಿನ ಕೊರತೆ ಮೂಲ ಕಾರಣವಾಗಿ ಕಾಡಲಾರಂಭಿಸಿದ್ದು, ನೀರು ಸಂಗ್ರಹಣೆಯಿಂದಲೇ ಹೆಚ್ಚಿನ ಸಂಖ್ಯೆಯ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಗೊಳ್ಳುತ್ತಿದೆ. ಜತೆಗೆ ಅನೈರ್ಮಲ್ಯತೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ.

ನಗರ ಯೋಜನೆ ಇಲ್ಲದೆ ಅನಧಿಕೃತವಾಗಿ ತಲೆ ಎತ್ತಿರುವ ಬಡಾವಣೆ ಮತ್ತು ಈ ಹಿಂದೆ ಕೆರೆ ಮತ್ತು ತಗ್ಗು ಪ್ರದೇಶಗಳಾಗಿದ್ದ ಹಳೇ ಮತ್ತು ಹೊಸ ಗಾಂಧಿ ನಗರ, ಅಮ್ಮಾನಗರ, ಶಿವಾಜಿ ನಗರ, ರುಕ್ಮಿಣಿ ನಗರ, ವಡಗಾವಿಯ ಗಾಯತ್ರಿ ನಗರ, ವಡ್ಡರ ಛಾವಣಿ, ರೈತಗಲ್ಲಿ, ಶಾಸ್ತ್ರೀನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಶಂಕಿತ ಕಾಲರಾ ಪ್ರಕರಣಗಳು ದಾಖಲಾಗುತ್ತಿವೆ.

ಶನಿವಾರ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲೆ ಕಾಲರಾ ಪೀಡಿತ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿರುವುದು ನಗರ ಆಡಳಿತ ವ್ಯವಸ್ಥೆ ಸವಾಲಾಗಿ ಕಾಡುತ್ತಿದೆ. ಕುಡಿಯುವ ನೀರಿನ ಮೂಲಗಳಲ್ಲಿ ನೀರಿನ ಕೊರತೆಯಿಂದ ವಾರಕ್ಕೂ ಹೆಚ್ಚು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸಹಜವಾಗಿ ಕುಡಿಯುವ ನೀರಿನ ಸಂಗ್ರಹಣೆ ಮಾಡಲಾಗುತ್ತಿದೆ.

ಆದರೆ, ಕಾಲರಾ ಹರಡುವ ಸೊಳ್ಳೆಗಳು ಶುದ್ಧ ನೀರಿನಲ್ಲೆ ಹೆಚ್ಚು ಉತ್ಪತ್ತಿಯಾಗಲಿವೆ. ಆದ್ದರಿಂದ, ಕುಡಿಯುವ ಉದ್ದೇಶಕ್ಕೆ ಸಂಗ್ರಹಿಸುವ ನೀರನ್ನು ತೆರೆದಿಡದೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಜತೆಗೆ ಆಸುಪಾಸು ಪ್ರದೇಶಗಳಲ್ಲೂ ನೀರು ಸಂಗ್ರಹಣೆಗೊಳ್ಳದಂತೆ ಎಚ್ಚರಿಕೆ ವಹಿಸಬೇಕಿದೆ ಎನ್ನುತ್ತಿದೆ ಆರೋಗ್ಯ ಇಲಾಖೆ.

ದೃಢಪಟ್ಟ ಒಂದು ಪ್ರಕರಣ

ಕಾಲರಾ ರೋಗದ ಗಂಭೀರತೆ ಕುರಿತು ವಿಷ್ಣು ಗಲ್ಲಿಯ ನಡೆಸಿದ ಸಮೀಕ್ಷೆ ಪ್ರಕಾರ ಪ್ರತಿ ಮೂರರಿಂದ ನಾಲ್ಕು ಮನೆಗಳಲ್ಲಿ ಕಾಲರಾ ಶಂಕಿತ ರೋಗಿಗಳು ಕಂಡು ಬಂದಿದ್ದಾರೆ. ಆ ಪೈಕಿ ಒಂದು ಪ್ರಕರಣ ಕಾಲರಾ ಎಂದು ದೃಢಪಟ್ಟಿದೆ. ಆದರೆ, ವಿಷ್ಣು ಗಲ್ಲಿಯ ಶಂಕಿತ ಕಾಲರಾ ಪ್ರಕರಣ ಜೂ.17ರಂದೇ ದೃಢಪಟ್ಟಿದ್ದರೂ ಸರಿಯಾಗಿ ಎಂಟು ದಿನಗಳ ನಂತರ ಕಾಲರಾ ಪೀಡಿತ ಎಂದು ಘೋಷಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ