ಆ್ಯಪ್ನಗರ

ಹತ್ತರಗಿ ಟೋಲ್‌ ನಾಕಾ ಸಿಬ್ಬಂದಿಗೆ ಎಸ್‌ಪಿ ಕ್ಲಾಸ್‌

ಬೆಳಗಾವಿ: ತುರ್ತು ಮತ್ತು ವಿಐಪಿ (ಅತಿ ಮುಖ್ಯ ...

Vijaya Karnataka 4 Feb 2019, 5:00 am
ಬೆಳಗಾವಿ : ತುರ್ತು ಮತ್ತು ವಿಐಪಿ (ಅತಿ ಮುಖ್ಯ ವ್ಯಕ್ತಿಗಳ) ವಾಹನಗಳು ದಾಟಲು ಇದ್ದ ದ್ವಾರ ಮುಚ್ಚಿಟ್ಟು ಸತಾಯಿಸುತ್ತಿದ್ದ ಇಲ್ಲಿನ ಹತ್ತರಗಿ ಟೋಲ್‌ ನಾಕಾ ಸಿಬ್ಬಂದಿಗೆ ಎಸ್‌ಪಿ ಸುಧೀರ್‌ಕುಮಾರ ರೆಡ್ಡಿ ಶನಿವಾರ್‌ ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.
Vijaya Karnataka Web class from sp to staff of hattaragi toll gate
ಹತ್ತರಗಿ ಟೋಲ್‌ ನಾಕಾ ಸಿಬ್ಬಂದಿಗೆ ಎಸ್‌ಪಿ ಕ್ಲಾಸ್‌


ಬೆಳಗಾವಿಯಿಂದ ಸಂಕೇಶ್ವರದತ್ತ ತೆರಳುತ್ತಿದ್ದ ಎಸ್‌ಪಿ ಸುಧೀರ್‌ಕುಮಾರ ಅವರಿದ್ದ ಸರಕಾರಿ ವಾಹನ ತುರ್ತು ಪ್ರವೇಶ ದ್ವಾರದ ಬಳಿ ಹೋದಾಗ ಅದು ಬಂದ್‌ ಆಗಿತ್ತು. ಇನ್ನೊಂದು ದಿಕ್ಕಿನಲ್ಲಿ ಕಲ್ಲುಗಳನ್ನು ಹಾಕಿದ್ದರು. ಇದರಿಂದ ಕೆರಳಿದ ಎಸ್‌ಪಿ ಅಲ್ಲಿನ ಸಿಬ್ಬಂದಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಎಸ್‌ಪಿ ಆವಾಜ್‌ಗೆ ಕಂಗಾಲಾದ ಸಿಬ್ಬಂದಿ ಮುಚ್ಚಿದ್ದ ತುರ್ತು ದ್ವಾರವನ್ನು ತೆರೆದು ವಾಹನ ಹೋಗಲು ಅವಕಾಶ ಮಾಡಿದ್ದಾರೆ.

''ಈ ಹಿಂದೆಯೂ ಅಲ್ಲಿನ ಸಿಬ್ಬಂದಿ ಇದೇ ರೀತಿ ಮಾಡಿದ್ದರು. ಪೊಲೀಸ್‌, ಕಂದಾಯ, ಆಂಬ್ಯುಲೆನ್ಸ್‌ ವಾಹನಗಳು ನೇರವಾಗಿ ಹೋಗಲು ಪ್ರತಿ ಟೋಲ್‌ ನಾಕಾ ಬಳಿ ತುರ್ತು ದ್ವಾರ ಇರುತ್ತದೆ. ಅಲ್ಲಿ ಬ್ಯಾರಿಕೇಡ್‌ ಹಾಕಿ ಒಬ್ಬ ಸಿಬ್ಬಂದಿ ಇಡಬೇಕು. ತುರ್ತು ಅಥವಾ ವಿಐಪಿ ವಾಹನ ಬಂದ ಕೂಡಲೇ ಬ್ಯಾರಿಕೇಡ್‌ ತೆರೆದು ವಾಹನಕ್ಕೆ ದಾರಿ ಮಾಡಿಕೊಡಬೇಕು. ಹತ್ತರಗಿ ಟೋಲ್‌ ನಾಕಾದಲ್ಲಿ ತುರ್ತು ದ್ವಾರ ಬಂದ್‌ ಮಾಡಿದ್ದರು. ಅಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಇದರಿಂದ ಅನೇಕ ತುರ್ತು ಸಂದರ್ಭದಲ್ಲಿ ಸಮಸ್ಯೆಯಾಗುವ ಅಪಾಯ ಇರುತ್ತದೆ. ಅದಕ್ಕೆ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದೇನೆ'' ಎಂದು ಎಸ್‌ಪಿ ಸುಧೀರ್‌ಕುಮಾರ್‌ ರೆಡ್ಡಿ 'ವಿಕ'ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ