ಆ್ಯಪ್ನಗರ

ರಮೇಶ್‌ ಜಾರಕಿಹೊಳಿ ಪ್ರಯತ್ನದಿಂದ ಸಿಎಂ

ಗೋಕಾಕ: ''ರಮೇಶ್‌ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ನಾನು ...

Vijaya Karnataka 24 Nov 2019, 5:00 am
ಗೋಕಾಕ: ''ರಮೇಶ್‌ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿಕುಳಿತಿದ್ದೇನೆ. ಅವರಿಂದಾಗಿಯೇ ಮುಖ್ಯಮಂತ್ರಿಯಾಗಿದ್ದೇನೆ'', ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web 23GOK4_53
ಗೋಕಾಕದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿಶನಿವಾರ ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ ಪರ ಚುನಾವಣೆ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.


ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ ಪರ ಮತಯಾಚಿಸಿ, ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

''ಮನಸ್ಸು ಮಾಡಿದ್ದರೆ ಮೈತ್ರಿ ಸರಕಾರದಲ್ಲೇ ರಮೇಶ್‌ ಮಂತ್ರಿಗಿರಿ ಪಡೆಯುತ್ತಿದ್ದರು. ಆದರೆ, ಅವರು ಅಲ್ಲಿನ ದುರಾಡಳಿತದಿಂದ ಹೊರಬಂದು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ನಾನು ಮೂರು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕಾದರೆ ವೀರಶೈವ ಲಿಂಗಾಯತರು ಸೇರಿ ಸರ್ವಧರ್ಮೀಯರು ಬೆಂಬಲಿಸಬೇಕು'', ಎಂದು ಮನವಿ ಮಾಡಿದರು.

''ನಾನು ಜಾತಿವಾದಿಯಲ್ಲ. ಹಿಂದು-ಮುಸ್ಲಿಮರ ಮಧ್ಯೆ ಭೇದ ಭಾವ ಮಾಡಿಲ್ಲ. 17 ಜನರನ್ನು ಕಟ್ಟಿಕೊಂಡು ರಮೇಶ್‌ ಹೋರಾಟ ಮಾಡದಿದ್ದರೆ ಜಗದೀಶ್‌ ಶೆಟ್ಟರ್‌, ಶಶಿಕಲಾ ಜೊಲ್ಲೆಮತ್ತು ನಾನು ವಿಧಾನಸೌಧದ ಮೂರನೇ ಕೊಠಡಿಯಲ್ಲಿಇರುತ್ತಿರಲಿಲ್ಲ. ಅವರ ತ್ಯಾಗವನ್ನು ಜೀವನ ಇರುವವರೆಗೆ ಮರೆಯೋದಕ್ಕೆ ಆಗೋದಿಲ್ಲ'', ಎಂದು ಬಿಎಸ್‌ವೈ ಹೇಳಿದರು.

ಕೇಂದ್ರ ಸಚಿವ ಸುರೇಶ್‌ ಅಂಗಡಿ, ''ಎಲ್ಲತರಹದ ಅಪಮಾನ ಸಹಿಸಿ ಬಿಎಸ್‌ವೈ ಸಿಎಂ ಆಗಲು ರಮೇಶ್‌ ಜಾರಕಿಹೊಳಿ ಕಾರಣರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮತದಾರರು ಪ್ರಬುದ್ಧರಿದ್ದು, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತಿಸಿ ಮತ ನೀಡಬೇಕಿದೆ'', ಎಂದರು.

''ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ಬಿಟ್ಟು ಹೊರಬಂದರು. ಇಂದು ನಾವು ಈ ಸ್ಥಿತಿಯಲ್ಲಿರಲು ಅವರ ತ್ಯಾಗ ಬಹಳ ದೊಡ್ಡದು'', ಎಂದು ಸಚಿವರಾದ ಜಗದೀಶ್‌ ಶೆಟ್ಟರ್‌, ಶಾಸಕಿ ಶಶಿಕಲಾ ಜೊಲ್ಲೆಹೇಳಿದರು.

ಶಾಸಕರಾದ ಆನಂದ ಮಾಮನಿ, ಅನಿಲ ಬೆನಕೆ, ಉಮೇಶ್‌ ಕತ್ತಿ, ಎ.ಎಸ್‌.ಪಾಟೀಲ ನಡಹಳ್ಳಿ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಭೀಮಶಿ ಜಾರಕಿಹೊಳಿ, ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಚಮಚಾಗಿರಿಯ ಕಾಂಗ್ರೆಸ್‌:
''ನಮ್ಮ ಜತೆ ಇನ್ನೂ 13 ಶಾಸಕರಿದ್ದಾರೆ. 35 ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಮನಸ್ಸು ಮಾಡಿದರೆ ಇಡೀ ಕಾಂಗ್ರೆಸ್‌ ಪಕ್ಷ ಖಾಲಿ ಮಾಡುವ ಶಕ್ತಿ ನನಗಿದೆ. ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಕಾಲದ ಕಾಂಗ್ರೆಸ್‌ ಈಗಿಲ್ಲ. ಬರೀ ಚಮಚಾಗಿರಿ ಮಾಡುವವರ ಕಾಂಗ್ರೆಸ್‌ ಇದೆ'', ಎಂದು ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಚುನಾವಣೆ ಹೇಗೆ ಮಾಡಬೇಕು ಎಂದು ಅಮಿತ್‌ ಶಾ ತರಬೇತಿ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲಿಚುನಾವಣೆ ಮಾಡುತ್ತೇವೆ. ಫಲಿತಾಂಶ ಬಂದ ನಂತರ ನಿಮಗೆ ಅಚ್ಚರಿಯಾಗಲಿದೆ.
- ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಕೆಎಂಎಫ್‌ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ