ಆ್ಯಪ್ನಗರ

ನೆರೆ ಪ್ರದೇಶದಲ್ಲಿ ತಕ್ಷ ಣ ಶಾಲೆ ಆರಂಭಿಸಲು ಆಗ್ರಹ

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ...

Vijaya Karnataka 25 Aug 2019, 5:00 am
ಬೆಳಗಾವಿ: ಗ್ರಾಮೀಣ ಭಾಗದಲ್ಲಿ ನೆರೆಯಿಂದ ಹಾಳಾಗಿರುವ ಶಾಲೆಗಳನ್ನು ತುರ್ತಾಗಿ ಸರಿಪಡಿಸಿ ತರಗತಿ ಆರಂಭಿಸದಿದ್ದರೆ ಮಕ್ಕಳು ಬಾಲಕಾರ್ಮಿಕರಾಗಿ ಬದಲಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ್‌ ಹೇಳಿದರು.
Vijaya Karnataka Web BEL-SAMAJIKA PARIVARTHANA JANAANDOLAN PRESS MEET (1)


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನದಿ ತೀರದ ಬಹಳಷ್ಟು ಗ್ರಾಮಗಳಲ್ಲಿ ಹಾಳಾಗಿರುವ ಮತ್ತು ಕಸ ಕಡ್ಡಿ ತುಂಬಿಕೊಂಡಿರುವ ಶಾಲೆ, ಅಂಗನವಾಡಿ ಕೇಂದ್ರಗಳು ಇನ್ನೂ ದುರಸ್ತಿಗೊಂಡಿಲ್ಲ. ಒಂದೊಂದಾಗಿ ಕಾಳಜಿ ಕೇಂದ್ರಗಳೂ ಬಂದ್‌ ಆಗುತ್ತಿದ್ದು ಜನರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಶಾಲೆಗಳು ತಕ್ಷಣ ಆರಂಭಗೊಳ್ಳದಿದ್ದರೆ ಮಕ್ಕಳಲ್ಲಿ ಕಲಿಕೆಯಿಂದ ದೂರ ಉಳಿಯುವ ಮನೋಭಾವನೆ ಬೆಳೆಯಬಹುದು. ಬಹಳಷ್ಟು ಮಕ್ಕಳು ಕುಟುಂಬದ ಜತೆ ಕೂಲಿ ಕೆಲಸಗಳನ್ನು ಅವಲಂಬಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳು ಸುಲಭವಾಗಿ ಆಸೆ ಆಮಿಷಗಳಿಗೆ ಬಲಿಯಾಗುವ ಸಾಧ್ಯತೆಗಳು ಇರುವುದರಿಂದ ಅಂತಹ ಕುಟುಂಬಗಳಲ್ಲಿ ಬಾಲ್ಯ ವಿವಾಹ ಮತ್ತು ಮಹಿಳೆ, ಮಕ್ಕಳ ಮಾರಾಟ ಕೂಡ ನಡೆಯಬಹುದು. ಹಾಗಾಗಿ ತಕ್ಷಣ ಶಾಲೆಗಳನ್ನು ಪುನರಾರಂಭಿಸಬೇಕು. ಶಾಲೆಗಳು ಹಾನಿಗೆ ತುತ್ತಾಗಿದ್ದರೆ ಪರ್ಯಾಯ ಸ್ಥಳದಲ್ಲಾದರೂ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಮರಿಸ್ವಾಮಿ ಮಾತನಾಡಿ, ನೆರೆಗೆ ತುತ್ತಾದ ಕುಟುಂಬಗಳು ಅಗತ್ಯ ದಾಖಲಾತಿಗಳನ್ನು ಕಳೆದುಕೊಂಡಿರುವುದರಿಂದ ಸಂತ್ರಸ್ತರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು. ಶಾಲಾ ಕಟ್ಟಡಗಳ ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಬೇಕು. ಮಕ್ಕಳ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತ ಒತ್ತು ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಶೋಭಾ ಗಸ್ತಿ, ಕಾರ್ಯದರ್ಶಿ ವಿಠಲ ಚಿಕಣಿ, ರಾಜ್ಯ ಸಮಿತಿ ಸದಸ್ಯ ಆನಂದ ರಾಜ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ