ಆ್ಯಪ್ನಗರ

ಅಥಣಿ ಪಟ್ಟಣದ ಐತಿಹಾಸಿಕ ಕೆರೆ ನಿರ್ಮಾಣಕ್ಕೆ ಬದ್ದ

ಅಥಣಿ: ಪಟ್ಟಣದಲ್ಲಿರುವ ಐತಿಹಾಸಿಕ ಕೆರೆಯನ್ನು 10 ಕೋಟಿ ರೂ...

Vijaya Karnataka 17 Sep 2019, 5:00 am
ಅಥಣಿ: ಪಟ್ಟಣದಲ್ಲಿರುವ ಐತಿಹಾಸಿಕ ಕೆರೆಯನ್ನು 10 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲು ತಾವು ಬದ್ಧರಿರುವುದಾಗಿ ಉಪಮುಖ್ಯಮಂತ್ರಿ ಲಕ್ಷತ್ರ್ಮಣ ಸವದಿ ಹೇಳಿದರು.
Vijaya Karnataka Web 16 ATHANI-04_53


ಅವರು ಇಲ್ಲಿನ ಲಕ್ಷಿತ್ರ್ಮಗುಡ್ಡದ ಬಳಿ 1.10 ಕೋಟಿ ಅನುದಾನದಲ್ಲಿಲಕ್ಷಿತ್ರ್ಮೕದೇವಿ ವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಅಥಣಿ ಪಟ್ಟಣ ಐತಿಹಾಸಿಕ ಎರಡೂ ಕೆರೆಗಳನ್ನು ಜೋಡಿಸಿ ಪಕ್ಕದಲ್ಲಿವಾಕಿಂಗ್‌ ಸ್ಟ್ರೀಟ್‌ ಮಾಡುವುದು ತಮ್ಮ ಹಲವು ವರ್ಷದ ಯೋಜನೆಯಾಗಿದೆ. ಮುಂಗಡವಾಗಿ ಎರಡು ಕೋಟಿ ರೂ. ಕೂಡ ಬಿಡುಗಡೆಯಾಗಿತ್ತು ಎಂದ ಅವರು, ಬೆಳಗಾವಿಯ ಕೋಟೆ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಲಾಗಿದೆ ಎಂದರು .

ಅಥಣಿಗೆ ಆರ್‌ಟಿಒ ಕಚೇರಿ ಮಂಜೂರಾಗಿದ್ದು ಈಗಾಗಾಲೆ 6 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದರು. ನಂತರದಲ್ಲಿ ಅಥಣಿ ಪಟ್ಟಣದಲ್ಲಿ ಮುಖ್ಯ ರಸ್ತೆ ಅಂಬೇಡ್ಕರ ವೃತ್ತದಿಂದ ಬುಟಾಳಿ ಪೆಟ್ರೋಲ್‌ ಪಂಪ್‌ವರೆಗಿನ ಸುಮಾರು 4 ಕೋಟಿ ಅನುದಾನದ 800 ಮೀ.ನಷ್ಟು ರಸ್ತೆ ನಿರ್ಮಾಣ ಕಾರ್ಯ ಸೇರಿ ವಿವಿಧ ಕಾರ್ಯಗಳಿಗೆ ಸಚಿವರು ಚಾಲನೆ ನೀಡಿದರು.

ಜೆ.ಇ.ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿ, ಲಕ್ಷಿತ್ರ್ಮ ಗುಡ್ಡದಲ್ಲಿನಡೆಯುವ ವನೀಕರಣದಲ್ಲಿ ಒಂದು ಗಿಡಕ್ಕೆ ಮೂರು ಜನ ಜೆ.ಇ.ಶಿಕ್ಷಣ ಸಂಸ್ಥೆಯ ವಿದ್ಯಾಥಿಗಳನ್ನು ನಿರ್ವಹಣೆಗೆ ನೇಮಿಸಲಾಗುವುದು ಎಂದು ತಿಳಿಸಿದರು.

ಶೆಟ್ಟರಮಠದ ಮರುಳಸಿದ್ಧ ಸ್ವಾಮಿಗಳು, ರಾಯಬಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ, ಚಿಕ್ಕೋಡಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸಂದೀಪ ಅಭ್ಯಂಕರ, ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ ಗಂಗಾಧರ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸುರೇಶ ಬಾಗಿ, ಎಸ್‌.ಎಂ.ಮುಂಜೆ, ಆರ್‌.ಆರ್‌.ಪಾಟೀಲ, ರಾಯಪ್ಪ ಬಗಲಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ