ಆ್ಯಪ್ನಗರ

ನ್ಯಾಯ ಕೋರಿ ಎಸ್ಪಿಗೆ ದೂರು

ಆಸ್ತಿಗಾಗಿ ಸಂಬಂಧಿಕರು ಹಲ್ಲೆ ಮಾಡಿ, ಮನೆಯಿಂದ ಹೊರಹಾಕಿದ್ದು, ನ್ಯಾಯ ಕೊಡಿಸುವಂತೆ ಕಟಕೋಳ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೆ ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ...

Vijaya Karnataka 27 Sep 2018, 5:00 am
ಬೆಳಗಾವಿ: ಆಸ್ತಿಗಾಗಿ ಸಂಬಂಧಿಕರು ಹಲ್ಲೆ ಮಾಡಿ, ಮನೆಯಿಂದ ಹೊರಹಾಕಿದ್ದು, ನ್ಯಾಯ ಕೊಡಿಸುವಂತೆ ಕಟಕೋಳ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೆ ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದ ಒಂದು ಕುಟುಂಬ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಬುಧವಾರ ದೂರು ನೀಡಿದೆ. ಲಕ್ಕಪ್ಪ ಕೃಷ್ಣಪ್ಪ ರಾಥೋಡ ಮತ್ತು ಅವರ ಮಕ್ಕಳಾದ ಲಕ್ಷ್ಮಣ, ಪರಶುರಾಮ, ಸಂತೋಷ, ಶಿವಾಜಿ, ಮಹಾಂತೇಶ, ವಿಷ್ಣು ಎಂಬುವವರು ನಮ್ಮ ತಂದೆಗೆ ಬರಬೇಕಾದ ಏಳು ಎಕರೆ ಜಮೀನು ಮತ್ತು ಎರಡು ಮನೆಯ ಆಸ್ತಿಗಾಗಿ ಹಲ್ಲೆ ಮಾಡಿ ಮನೆಯಿಂದ ಕುಟುಂಬವನ್ನು ಹೊರಹಾಕಿದ್ದಾರೆ. ಈ ಬಗ್ಗೆ ಕಟಕೋಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದರೆ, ಠಾಣೆಯ ಪೇದೆ ವಿಜಯ ರಾಥೋಡ ಮಾತನ್ನು ಕೇಳಿ ದೂರು ಸ್ವೀಕರಿಸಿಲ್ಲ. ಮನೆಗೆ ವಾಪಸ್‌ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರಿಗೆ ಹೆದರಿ ಬೆಳಗಾವಿಯಲ್ಲಿ ಬಂದು ವಾಸಿಸುತ್ತಿದ್ದೇವೆ ಎಂದು ಸುನೀಲ ಯಂಕಪ್ಪ ರಾಥೋಡ ದೂರಿನಲ್ಲಿ ತಿಳಿಸಿದ್ದಾರೆ.
Vijaya Karnataka Web BEL-26 LBS 2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ