ಆ್ಯಪ್ನಗರ

ವಸತಿ ಶಾಲೆಗೆ ಜಾಗ ನೀಡಲು ಸ್ಪಂದಿಸದ ಜಿಲ್ಲಾಡಳಿತದ ಕ್ರಮಕ್ಕೆ ಖಂಡನೆ

ತೆಲಸಂಗ: 12 ಎಕರೆ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಯ ಡಾಬಿಆರ್‌...

Vijaya Karnataka 12 Jul 2019, 5:00 am
ತೆಲಸಂಗ : 12 ಎಕರೆ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ ಹೆಸರಲ್ಲಿ ಬಿಟ್ಟುಕೊಡುವಂತೆ ಗ್ರಾಮ ಪಂಚಾಯಿತಿ ಮೂಲಕ ಠರಾವು ಮಾಡಿ ಕೊಟ್ಟು 3 ವರ್ಷ ಕಳೆದರೂ ಸ್ಪಂದಿಸದ ಜಿಲ್ಲಾ ಆಡಳಿತದ ಕಾರ್ಯ ಖಂಡನೀಯ ಎಂದು ಯುವ ಮುಖಂಡ ಅಪ್ಪು ಜಮಾದರ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-11TELSANG1


ಗುರುವಾರ ಗ್ರಾಮದ ಅಂಬೇಡ್ಕರ್‌ ವಸತಿ ಶಾಲೆಯ ಪ್ರಾಚಾರ್ಯ ಶಶಿಕಾಂತ ಶಿವನೂರ ಅವರ ಬೀಳ್ಕೊಡುಗೆ ಮತ್ತು ಅಪ್ಪುರಾಜ್‌ ಬಜಂತ್ರಿಯವರು ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ ಮತ್ತು ಬೆಸ್ಟ್‌ ಟೀಚರ್‌ ಅವಾರ್ಡ್‌ ಪಡೆದಿದ್ದಕ್ಕೆ ಗ್ರಾಮಸ್ಥರಿಂದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಾಯರಾಣ ಭೂಮಿಯನ್ನು ಶಾಲೆಗೆ ಬಿಟ್ಟುಕೊಡಲು ಎಲ್ಲ ವರದಿ ಸಿದ್ಧಗೊಂಡು ಡಿಸಿ ಕಚೇರಿಯಲ್ಲಿ ಕೊಳೆಯುತ್ತಿರುವ ಫೈಲ್‌ಗೆ ಮುಕ್ತಿ ದೊರೆಯಬೇಕಿದೆ. ಇಲ್ಲವೆ ಫೈಲ್‌ ಸಹಿ ಮಾಡದಿರುವುದಕ್ಕೇ ಕಾರಣ ತಿಳಿಸಬೇಕಿದೆ. ಶಾಲೆಯ ಹೆಸರಲ್ಲಿ ಪಹಣಿ ದೊರೆಯದ ಕಾರಣ ಕಟ್ಟಡ ಕೆಲಸ ಪ್ರಾರಂಭವಾಗುತ್ತಿಲ್ಲ. ಫೈಲ್‌ಗೆ ಸಹಿ ಹಾಕಬೇಕು ದಾಖಲೆಗಳ ಕೊರತೆ ಇದ್ದರೆ ಸೂಚನೆ ನೀಡಿ ತರಿಸಿಕೊಳ್ಳಬೇಕು. ಅದು ಬಿಟ್ಟು ವಿನಾಕಾರಣ ವಿಳಂಬ ಮಾಡುತ್ತಿರುವ ಜಿಲ್ಲಾ ಆಡಳಿತದ ಉದ್ದೇಶ ಅರ್ಥವಾಗುತ್ತಿಲ್ಲ. ಹೀಗೆಯೇ ಮುಂದುವರಿದರೆ ಜಿಲ್ಲಾ ಆಡಳಿತದ ವಿರುದ್ಧ ಬೀದಿಗಿಳಿದು ಹೋರಾಡುವುದು ಅನಿವಾರ್ಯ ಎಂದರು.

ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದ ಪ್ರಾಚಾರ್ಯ ಶಶಿಕಾಂತ ಶಿವನೂರ ಹಾಗೂ ಬೆಸ್ಟ್‌ ಟೀಚರ್‌ ಅವಾರ್ಡ್‌ ಪಡೆದ ನೂತನ ಪ್ರಾಚಾರ್ಯ ಅಪ್ಪುರಾಜ್‌ ಬಜಂತ್ರಿ ಮಾತನಾಡಿದರು.

ಗ್ರಾಪಂ ಸದಸ್ಯರಾದ ರಾಕೇಶ ಮಣ್ಣಪ್ಪಗೋಳ, ಮೌಲಾಲಿ ಮಡ್ಡಿಮನಿ, ಅಪ್ಪು ಹೆಗಡ್ಯಾಳ, ಹಾಫೀಸಾಬ್‌ ರಿಜ್ವಾನ್‌ ಮೀರಾಗೋಳ, ಬಂದೇನವಾಜ್‌ ಉಳ್ಳಾಗಡ್ಡಿ, ರೇಣುಕಾ ಹೊಸಮನಿ, ರೂಪಾ ಪಾಟೀಲ, ಪ್ರವೀಣ ಕಾಂಬಳೆ, ಹಣಮಂತ ಗಸ್ತಿ ಇದ್ದರು. ಎಂ.ಎಸ್‌.ಮಾಂಗ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ