ಆ್ಯಪ್ನಗರ

ಗಟಾರು ಮುಚ್ಚಿ ಕಾಂಕ್ರಿಟ್‌ ರಸ್ತೆ ನಿರ್ಮಾಣ

ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆ ಹೆಸರಿನಲ್ಲಿ ನಗರದಲ್ಲಿ ...

Vijaya Karnataka 3 Jan 2020, 5:00 am
ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆ ಹೆಸರಿನಲ್ಲಿನಗರದಲ್ಲಿಕಳಪೆ ಕಾಮಗಾರಿ ನಡೆಯುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.
Vijaya Karnataka Web 2CAMP080803
ಕ್ಯಾಂಪ್‌ ಪ್ರದೇಶದ ಗ್ಲೋಬ್‌ ಟಾಕೀಸ್‌ ಬಳಿ ಗಟಾರು ಮೇಲೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಿರುವುದು.


ಇಲ್ಲಿನ ಖಾನಾಪುರ ರಸ್ತೆಯ ದಂಡು ಮಂಡಳಿ ಕಚೇರಿ ಬಳಿ ಗಟಾರು ಮುಚ್ಚಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದಂಡು ಮಂಡಳಿ ಕಚೇರಿ ಬಳಿ ರಸ್ತೆ ಮಳೆಗಾಲದಲ್ಲಿಕೆರೆ ಸ್ವರೂಪ ಪಡೆದುಕೊಳ್ಳುತ್ತದೆ. ರಸ್ತೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮಳೆ ನೀರು ಸಾಗಲು ಹಳೇ ಕಾಲದ ಸಣ್ಣ ಗಾತ್ರ ಗಟಾರು ಇದೆ. ಆದರೆ, ಭಾರಿ ಪ್ರಮಾಣದಲ್ಲಿನೀರು ಹರಿದು ಬಂದಾಗ ಫಿಶ್‌ ಮಾರ್ಕೆಟ್‌ನಿಂದ ಗ್ಲೋಬ್‌ ಟಾಕೀಜ್‌ವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಇದೇ ಕಾರಣದಿಂದ ಪ್ರತಿ ವರ್ಷ ಮಳೆಗಾಲದಲ್ಲಿಸ್ಥಳೀಯರು, ಸಾರ್ವಜನಿಕರು ಮತ್ತು ವಾಹನ ಚಾಲಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಅದೇ ಪ್ರದೇಶದಲ್ಲಿಗಟಾರು ಮೇಲೆ ರಸ್ತೆ ನಿರ್ಮಿಸಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ.

ರಾತ್ರೋ ರಾತ್ರಿ ನಿರ್ಮಾಣ: ಗಟಾರು ನಿರ್ಮಿಸದೆ ರಸ್ತೆ ಮಾಡುವುದನ್ನು ಸ್ಥಳೀಯರ ಜತೆಗೂಡಿ ದಂಡು ಮಂಡಳಿ ಸದಸ್ಯ ರಿಜ್ವಾನ್‌ ಬೇಪಾರಿ ಹಲವಾರು ಬಾರಿ ವಿರೋಧಿಸಿದ್ದರು. ಆದರೆ, ಇದನ್ನು ಲೆಕ್ಕಿಸದೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬುಧವಾರ ರಾತ್ರೋರಾತ್ರಿ ಇಲ್ಲಿರಸ್ತೆ ನಿರ್ಮಿಸಿದ್ದಾರೆ.

ರಾಜಮಾರ್ಗ: ರಸ್ತೆ ಕಾಮಗಾರಿ ಹಿನ್ನೆಯಲ್ಲಿ ಚನ್ನಮ್ಮ ವೃತ್ತದಿಂದ ಒನ್‌ ವೇ ಸಂಚಾರ ಆರಂಭಿಸಲಾಗಿದೆ. ಆದರೆ, ಇದೇ ರಸ್ತೆಯಲ್ಲಿನ ಖಾಸಗಿ ಹೋಟೆಲ್‌ಗೆ 'ರಾಜಮಾರ್ಗ' ರೀತಿಯಲ್ಲಿಪ್ರತ್ಯೇಕ ಬ್ಯಾರಿಕೇಡ್‌ ಅಳವಡಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇಡೀ ರಸ್ತೆಯಲ್ಲಿ ಯಾವ ಅಂಗಡಿ, ಹೋಟೆಲ್‌, ಆಸ್ಪತ್ರೆಗಳಿಗೂ ಸಿಗದ ಸೌಲಭ್ಯ ನಿಗದಿತ ಹೋಟೆಲ್‌ಗೆ ಮಾತ್ರ ಏಕೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪ್ರತಿ 15 ಮೀಟರ್‌ಗೆ ಒಂದರಂತೆ ಎಲ್ಲಕಡೆಗೂ ನೀರು ಸರಬರಾಜು ಆಗಲು ಪೈಪ್‌ಲೈನ್‌ ಅಳವಡಿಕೆ ಮಾಡಲಾಗುತ್ತಿದೆ. ಹಳೇ ಗಟಾರು(ಸಿಡಿ)ಗಳಿದ್ದರೂ ಅವುಗಳನ್ನೂ ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಲಾಗುವುದು. ಕ್ಯಾಂಪ್‌ ಪ್ರದೇಶದಲ್ಲಿಗಟಾರು ಮುಚ್ಚಿ ರಸ್ತೆ ನಿರ್ಮಾಣವಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಶಶಿಧರ ಕುರೇರ. ಎಂಡಿ, ಸ್ಮಾರ್ಟ್‌ ಸಿಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ