ಆ್ಯಪ್ನಗರ

ಖಾನಾಪುರ ಅರಣ್ಯದಲ್ಲಿ ನಿರಂತರ ಮಳೆ

ಖಾನಾಪುರ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಿರಂತರ ...

Vijaya Karnataka 6 Jul 2019, 5:00 am
ಖಾನಾಪುರ : ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
Vijaya Karnataka Web BEL-5 KHANAPUR3


ಪಟ್ಟಣ ಸೇರಿದಂತೆ ತಾಲೂಕಿನ ಗುಂಜಿ, ನೀಲಾವಡೆ, ಲೋಂಡಾ, ಜಾಂಬೋಟಿ, ಕಣಕುಂಬಿ, ಹೆಮ್ಮಡಗಾ ಅರಣ್ಯದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಇಡೀ ದಿನ ಸತತವಾಗಿ ಮಳೆಯಾಗಿದೆ. ತಾಲೂಕಿನ ಮುಗಳಿಹಾಳ, ಅವರೊಳ್ಳಿ, ಕೊಡಚವಾಡ, ನಂದಗಡ, ಬೀಡಿ, ಕಕ್ಕೇರಿ, ಲಿಂಗನಮಠ, ಭುರಣಕಿ ಸುತ್ತಮುತ್ತಲಿನ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಉಳಿದೆಡೆ ಜಿಟಿಜಿಟಿ ಮಳೆ ಸುರಿದಿದೆ.

ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸತತ ಮಳೆಯ ಪರಿಣಾಮ ಕಾನನದಂಚಿನ ಕೆಲ ಗ್ರಾಮಗಳಲ್ಲಿ ವಿದ್ಯುತ್‌ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದುವರೆಗೂ ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ತಹಸೀಲ್ದಾರ ಕಚೇರಿಯ ಮೂಲಗಳ ಪ್ರಕಾರ ಶುಕ್ರವಾರ ಬೆಳಗಿನವರೆಗೆ ತಾಲೂಕಿನ ಕಣಕುಂಬಿಯಲ್ಲಿ 12 ಸೆಂ.ಮೀ, ಜಾಂಬೋಟಿಯಲ್ಲಿ 55 ಮಿ.ಮೀ, ಅಸೋಗಾದಲ್ಲಿ 83 ಮಿ.ಮೀ, ಖಾನಾಪುರ ಪಟ್ಟಣದಲ್ಲಿ 75 ಮಿ.ಮೀ, ಲೋಂಡಾದಲ್ಲಿ 44 ಮಿ.ಮೀ, ನಾಗರಗಾಳಿಯಲ್ಲಿ 36 ಮಿ.ಮೀ, ಬೀಡಿಯಲ್ಲಿ 19 ಮಿ.ಮೀ, ಗುಂಜಿಯಲ್ಲಿ 56 ಮಿ.ಮೀ ಹಾಗೂ ಕಕ್ಕೇರಿಯಲ್ಲಿ 13 ಮಿ.ಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ