ಆ್ಯಪ್ನಗರ

ಕುಂದಾನಗರಿ ಬೆಳಗಾವಿಗೆ ಬಂತು ಕೊರೊನಾ ಸಂಜೀವಿನಿ; ಪೂಜೆ ಮಾಡಿ, ಮಂತ್ರ ಹೇಳಿ ಲಸಿಕೆ ಸಂಗ್ರಹ!

ಕುಂದಾನಗರಿ ಬೆಳಗಾವಿಗೆ ಕೊರೊನಾ ಸಂಜೀವಿನಿ ಆಗಮಿಸಿದೆ. ಪುಣೆಯಿಂದ ಬೆಳಗಾವಿಯ ವ್ಯಾಕ್ಸಿನ್ ಡಿಪೋಗೆ ಕೊರೊನಾ ಲಸಿಕೆ ಬಂದಿದ್ದು,ಲಸಿಕೆ ಆಗಮಿಸುತ್ತಿದ್ದಂತೆಯೇ ಡಿ ಎಚ್ ಓ ಕಚೇರಿ ಬಳಿ ವಾಹನಕ್ಕೆ ಸಿಬ್ಬಂದಿಗಳು ಆರತಿ ಬೆಳಗಿ, ತೆಂಗಿನಕಾಯಿ ಕಾಯಿ ಒಡೆದು, ಮಂತ್ರ ಹೇಳಿ ಪೂಜೆ ಸಲ್ಲಿಸಿದರು.

Vijaya Karnataka Web 13 Jan 2021, 8:35 am
ಬೆಳಗಾವಿ: ಮಹಾರಾಷ್ಟ್ರದ ಪುಣೆಯಿಂದ ಸೀರಂ ಇನ್ಸ್ಟಿಟ್ಯೂಟ್‌ ತಯಾರಿಸಿರುವ ಕೊರೊನಾ ಲಸಿಕೆ ಈಗ ಮಹಾನಗರಗಳನ್ನು ತಲುಪಿದೆ. ಎರಡನೆ ಸುತ್ತಿನ ಲಸಿಕೆ ಜ.13ರಂದು ಕುಂದಾನಗರಿ ಬೆಳಗಾವಿಗೆ ಕೊರೊನಾ ಸಂಜೀವಿನಿ ಆಗಮಿಸಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದ್ದಾರೆ.
Vijaya Karnataka Web ಕೊರೊನಾ ಲಸಿಕೆ


ಬೆಳಗಾವಿಯ ಸುತ್ತಮುತ್ತಲಿನ ಜನರಿಗೆ ಇದೀಗ ಬಿಗ್ ರಿಲೀಪ್ ದೊರಕಿದೆ. ಪೊಲೀಸ್ ಎಸ್ಕಾರ್ಟ್ ನಲ್ಲಿ ಕೋವಿಶೀಲ್ಡ್ ಲಸಿಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದ್ದಾರೆ.


ಜಿಲ್ಲೆಗೆ ಕೋವಿಶಿಲ್ಡ್ 1.47 ಲಕ್ಷ ಡೋಜ್ ವ್ಯಾಕ್ಸಿನ್ ಬಂದಿದ್ದು, ಬೆಳಗಾವಿಯ ಜನತೆ ನಿರಾಳವಾಗಿದ್ದಾರೆ. 13 ಬಾಕ್ಸ್ ನಲ್ಲಿ ಲಸಿಕೆ ಆಗಮಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿ ‌ 12 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಮೊದಲಿಗೆ 37 ಸಾವಿರ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಲಸಿಕೆಯ ನಂತರ ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕೊನೆಗೂ ಬಂದೇ ಬಿಡ್ತು ಸಂಜೀವಿನಿ: ಬೆಂಗಳೂರು ತಲುಪಿದ ಕೋವಿಶೀಲ್ಡ್‌ ಕೊರೊನಾ ಲಸಿಕೆ!

ಬೆಳಗಾವಿ ಸೇರಿದಂತೆ 8 ಜಿಲ್ಲೆಗೆ ಇಂದು ಲಸಿಕೆ ರವಾನೆಯಾಗಲಿದ್ದು, ಒಂದು ದಿನದಲ್ಲಿ ನೂರು ಜನರಿಗೆ ಲಸಿಕೆ ವಿತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕೋವಿಡ್ ಲಸಿಕೆ ಸುರಕ್ಷಿತ, ಆತಂಕ ಬೇಡ ಎಂದ ಕೆ. ಸುಧಾಕರ್

ಬೆಳಗಾವಿಗೆ ಪುಣೆಯಿಂದ ಕೋವಿಶೀಲ್ಡ್ ಕೊರೊನಾ ಲಸಿಕೆ ಆಗಮಿಸುತ್ತಿದ್ದಂತೆಯೇ ಡಿ ಎಚ್ ಓ ಕಚೇರಿ ಬಳಿ ವಾಹನಕ್ಕೆ ಸಿಬ್ಬಂದಿಗಳು ಆರತಿ ಬೆಳಗಿ, ತೆಂಗಿನಕಾಯಿ ಕಾಯಿ ಒಡೆದು ಪೂಜೆ ಸಲ್ಲಿಸಿದರು. ಮಹಿಳಾ ಸಿಬ್ಬಂದಿಗಳು ವಾಹನದ ಮುಂದೆ ಗಣೇಶ ಶೋಸ್ತ್ರ ಹೇಳಿದ ನಂತರ ಕೋವಿಶೀಲ್ಡ್ ಲಸಿಕೆಯನ್ನ ವಾಕ್ ಇನ್ ಕೂಲರ್ ನಲ್ಲಿ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಡಿ ಎಚ್ ಓ ಶಶಿಕಾಂತ ಮುನ್ಯಾಳ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ