ಆ್ಯಪ್ನಗರ

ಬೆಳಗಾವಿ ಕೋಬ್ರಾ ಕಮಾಂಡೋಗೆ ಪೊಲೀಸ್ ಠಾಣೆಯಲ್ಲೂ ಹಲ್ಲೆ! ಫೋಟೋ ವೈರಲ್

ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕಾಗಿ ಬೆಳಗಾವಿಯಲ್ಲಿ ಸಿಆರ್‌ಪಿಎಫ್‌ ಕೋಬ್ರಾ ಪಡೆಯ ಯೋಧನನ್ನು ಬಂಧಿಸಿದ್ದ ಪೊಲೀಸರು ಠಾಣೆಯಲ್ಲೂ ಅಮಾನಯವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಾಗಿ ಫೋಟೋಗಳು ವೈರಲ್ ಆಗಿವೆ.

Vijaya Karnataka Web 29 Apr 2020, 3:20 pm
ಬೆಳಗಾವಿ: ಮಾಸ್ಕ್‌ ಧರಿಸಿಲ್ಲ ಎಂಬ ಕಾರಣಕ್ಕಾಗಿ ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ್ ಮೇಲೆ ಹಲ್ಲೆ ಹಾಗೂ ಬಂಧನ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಸ್ತೆಯಲ್ಲಿ ನಡೆದ ಜಟಾಪಟಿಯ ಬಳಿಕ ಯೋಧನನ್ನು ಬಂಧಿಸಿದ್ಧ ಪೊಲೀಸರು ಠಾಣೆಯಲ್ಲಿ ತೀವ್ರ ಸ್ವರೂಪದ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬುವಂತೆ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Vijaya Karnataka Web crpf


ಮಿತಾಂಶು ಚೌಧರಿ ಎಂಬುವವರು ಸಚಿನ್ ಸಾವಂತ್ ಅವರ ಎರಡು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕೋಬ್ರಾ ಕಮಾಂಡೋ ಸಚಿನ್‌ಗೆ 15 ಮಂದಿ ಪೊಲೀಸರು ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ ಆರೋಪ, ಚರ್ಚೆಗೆ ಗ್ರಾಸವಾದ ಬೆಳಗಾವಿ ಸಿಆರ್‌ಪಿಎಫ್‌ ಯೋಧನ ಬಂಧನ


ಹಲ್ಲೆಯ ಕುರಿತಾಗಿ ನ್ಯಾಯಾಧೀಶರ ಮುಂದೆ ಹೇಳಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದರಿಂದ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಯಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಹಲ್ಲೆಯಿಂದಾಗಿ ಗಾಯದ ಗುರುತಿರುವ ಎರಡು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿ ಬೆಳಗಾವಿ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

ಕೋಬ್ರಾ ಕಮಾಂಡೊ ಬಂಧನಕ್ಕೆ ಸಿಆರ್‌ಪಿಎಫ್‌ ಅಸಮಧಾನ, ಡಿಜಿಪಿ ಪ್ರವೀಣ್‌ ಸೂದ್‌ಗೆ ಪತ್ರ

ಏಪ್ರಿಲ್‌ 23 ಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯೋಧ ಸಚಿನ್ ಸಾವಂತ್ ಮನೆಯ ಮುಂದೆ ಬೈಕ್‌ ತೊಳೆಯುತ್ತಿದ್ದ ಸಂದರ್ಭದಲ್ಲಿ ಮಾಸ್ಕ್‌ ಧರಿಸಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮುಕಿ ನಡೆದಿತ್ತು. ಬಳಿಕ ಪೊಲೀಸರು ಲಾಠಿಯಲ್ಲಿ ಸಚಿನ್ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿನ್ ಕೂಡಾ ಹೊಡೆದಿದ್ದರು.

ಬಳಿಕ ಕೋಬ್ರಾ ಯೋಧನನ್ನು ಬಂಧಿಸಿದ ಪೊಲೀಸರು ಕೈಕೋಳ ತೊಡಿಸಿ ಕೂರಿಸಿದ ಫೋಟೋ ವೈರಲ್‌ ಆಗಿತ್ತು. ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಠಾಣೆಯಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪೊಲೀಸರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ಬಂಧನದಲ್ಲಿದ್ದ ಕೋಬ್ರಾ ಕಮಾಂಡೋ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ