ಆ್ಯಪ್ನಗರ

ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಬಿಡುವುದಿಲ್ಲ: ರಮೇಶ ಜಾರಕಿಹೊಳಿ

ಬೆಳಗಾವಿ: ''ಡಿಕೆಶಿ ಅಥವಾ ಯಾರೇ ಇರಲಿ, ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ...

Vijaya Karnataka 5 Sep 2018, 5:00 am
ಬೆಳಗಾವಿ: ''ಡಿಕೆಶಿ ಅಥವಾ ಯಾರೇ ಇರಲಿ, ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತೊಮ್ಮೆ ಖಡಕ್‌ ಸಂದೇಶ ರವಾನಿಸಿದ್ದಾರೆ.
Vijaya Karnataka Web d k sivkumar willnt be allowed to interfere in belagavi politics
ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಬಿಡುವುದಿಲ್ಲ: ರಮೇಶ ಜಾರಕಿಹೊಳಿ


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಡಿಕೆಶಿ ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡುವುದು, ನಾನು ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡೋದು ತಪ್ಪು. ಡಿಕೆಶಿ ಇರಲಿ, ರಮೇಶ ಜಾರಕಿಹೊಳಿ ಇರಲಿ ನಮ್ಮ ಜಿಲ್ಲೆ ನಾವೇ ನೋಡಿಕೊಳ್ಳಬೇಕು. ನಮ್ಮ ಸಮಸ್ಯೆ ಇದ್ದಾಗ ನಾವು ಕರೆದರೆ ಬರಲಿ. ಅವರಾಗಿ ಹಸ್ತಕ್ಷೇಪ ಮಾಡಲು ನಾವು ಬಿಡುವುದಿಲ್ಲ'' ಎಂದರು.

''ಬೆಳಗಾವಿ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಮತ ಕುರಿತು ಈಗಾಗಲೇ ಚರ್ಚೆ ಮಾಡಿದ್ದೇವೆ. ಅದನ್ನು ಮುಂದುವರಿಸುವುದು ಬೇಡ. ರಾಜಕಾರಣದಲ್ಲಿ ವಾಗ್ವಾದ ಆಗುವುದು ಸಾಮಾನ್ಯ. ಅದನ್ನೇ ವೈರತ್ವ ಅಂದುಕೊಂಡರೆ ಮೂರ್ಖತನ. ಸತೀಶ್‌ ಜಾರಕಿಹೊಳಿ ಮೃದುವಾಗಿ ಹೇಳುತ್ತಾರೆ. ನಾನು ಸಿಟ್ಟಿನಿಂದ ಹೇಳುತ್ತೀನಿ. ಇದು ಅವರವರ ಸ್ವಭಾವ'' ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

''ಪಿಎಲ್‌ಡಿ ಬ್ಯಾಂಕ್‌ ಬಗ್ಗೆ ನನಗೆ ಗೊತ್ತಿಲ್ಲ. ಮೂರ್ನಾಲ್ಕು ಜನ ಶಾಸಕರಿದ್ದಾರೆ. ಸಮಸ್ಯೆ ಪರಿಹಾರ ಮಾಡಿಕೊಳ್ಳುತ್ತಾರೆ. ಲಕ್ಷ್ಮೀ ಹೆಬ್ಬಾಳಕರ್‌ ನನ್ನ ಜತೆ ಮಾತನಾಡಿಲ್ಲ. ಸತೀಶ್‌ ಜಾರಕಿಹೊಳಿ ಮಾತಾಡಿದ್ದಾರೆ. ಹಾಗಾಗಿ ಅವರ ಜತೆ ಮಾತನಾಡಿದ್ದೀನಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತವಿರಬೇಕು. ನಾವು ಹೇಳಿದ್ದಕ್ಕೆ ತಲೆಯಾಡಿಸುವ ಹಾಗಿದ್ದರೆ ಹಿಟ್ಲರ್‌ ಸಂಸ್ಕೃತಿ ಆಗುತ್ತದೆ'' ಎಂದ ಅವರು, ''ಶೋಪೀಸ್‌ಗಳ ಮಾತು ಕೇಳಿದ್ರೆ ಕಾಂಗ್ರೆಸ್‌ ಹಾಳಾಗುತ್ತದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ