ಆ್ಯಪ್ನಗರ

ಶ್ರೀ ಕ್ಷೇತ್ರ ನರಸಿಂಹವಾಡಿ ದತ್ತಮಂದಿರ ಮುಳುಗಡೆ

ಇಚಲಕರಂಜಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ...

Vijaya Karnataka 2 Aug 2019, 5:00 am
ಇಚಲಕರಂಜಿ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿನೀರಿನ ಮಟ್ಟ ಭರದಿಂದ ಏರುತ್ತಿದ್ದು ಪಂಚಗಂಗಾ ಕೃಷ್ಣಾ ನದಿಗಳ ಸಂಗಮ ಶ್ರೀ ಕ್ಷೇತ್ರ ನರಸಿಂಹವಾಡಿಯ ದತ್ತಮಂದಿರ ಸಂಪೂರ್ಣ ಮುಳುಗಡೆಯಲಾಗಿದ್ದು ಶ್ರೀಗಳ ಉತ್ಸವಮೂರ್ತಿಯನ್ನು ಮುಖ್ಯ ಮಂದಿರದ ಮೇಲುಗಡೆಯಿದ್ದ ನಾರಾಯಣಸ್ವಾಮಿ ಮಂದಿರದಲ್ಲಿ ಭಕ್ತರ ದರ್ಶನಕ್ಕಾಗಿ ಇಡಲಾಗಿದ್ದು ಅಲ್ಲಿಯೇ ಪೂಜೆ, ಅರ್ಚನೆ, ಆರತಿ ನಡೆಯುತ್ತಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ರು 'ವಿಜಯಕರ್ನಾಟಕ'ಕ್ಕೆ ತಿಳಿಸಿದರು.
Vijaya Karnataka Web BEL-1ICH3


ಮೂರು ದಿನಗಳಿಂದ ಬಿಟ್ಟೂಬಿಡದೆ ಮಳೆ ಸುರಿಯುತ್ತಿದ್ದು ಕೃಷ್ಣಾ ನದಿನೀರಿನ ಮಟ್ಟ ಭರದಿಂದ ಏರುತ್ತಿದೆ. ಮೂರು ದಿನಗಳಲ್ಲಿ 20ಅಡಿ ನೀರು ಹೆಚ್ಚಾಗಿದ್ದರಿಂದ ಪ್ರವಾಹ ಅಪಾಯದ ಮಟ್ಟ ತಲುಪಿದೆ. ಇದೇ ರೀತಿ ಮಳೆ ಮುಂದುವರೆದರೆ ನರಸಿಂಹವಾಡಿ ನಗರ ಪ್ರದೇಶದಲ್ಲಿ ಪ್ರವಾಹದ ನೀರು ಬರಲಿದೆ.

ಪ್ರವಾಹ ಪರಿಸ್ಥಿತಿ ಎದುರಿಸಲು ದತ್ತ ದೇವಸ್ಥಾನ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸಿದ್ಧತೆ ನಡೆಸಿದ್ದು ನದಿ ತೀರದ ವಸತಿ ಪ್ರದೇಶದ ಜನ ಸುರಕ್ಷ ತೆಗಾಗಿ ಬೇರೆಡೆ ತೆರಳುತ್ತಿದ್ದಾರೆ. ಗುರುವಾರ ಶ್ರಾವಣ ಮಾಸದ ಅಮವಾಸ್ಯೆಯಾಗಿದ್ದರಿಂದ ಕರ್ನಾಟಕ, ಮಹಾರಾಷ್ಟ್ರಗಳಿಂದ ಸಾವಿರಾರು ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದು ನಾರಾಯಣ ಸ್ವಾಮಿ ಮಂದಿರದಲ್ಲಿಯೂ ದಟ್ಟಣೆಯಾಗುತ್ತಿದೆ.

ಸತತ ಮಳೆ ಸುರಿಯುತ್ತಿರುವುದರಿಂದ ಈ ಭಾಗದಲ್ಲಿ ತಮ್ಮದೇ ಆದ ಬ್ರ್ಯಾಂಡ್‌ಗಳನ್ನು ಹೊಂದಿರುವ ಪೇಡೆ, ಲಡ್ಡು, ಖವೆ, ಬರ್ಫಿ ಹಾಗೂ ಹೋಟೆಲ್‌ ಉದ್ಯಮಗಳ ಮೇಲೂ ಪರಿಣಾಮವಾಗುತ್ತಿದೆ. ರೋಗ ರುಜಿನಗಳು ಹರಡದಂತೆ ಗ್ರಾಪಂನಿಂದ ಔಷಧ ಸಿಂಪಡಿಸಲಾಗುತ್ತಿದ್ದು ಸಾರ್ವಜನಿಕರಿಗೆ ನೀರನ್ನು ಬೇಯಿಸಿ ಆರಿಸಿ ಕುಡಿಯಲು ಡಂಗುರ ಸಾರಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ