ಆ್ಯಪ್ನಗರ

ವಿಡಿಯೊ ಕಾಲ್‌ನಲ್ಲಿ ತಂದೆಯ ಅಂತ್ಯ ಸಂಸ್ಕಾರ ನೋಡಿ ಕಣ್ಣೀರಿಟ್ಟ ಪುತ್ರಿ

ಹುಕ್ಕೇರಿ (ಬೆಳಗಾವಿ): ಕೊರೊನಾ ಸೀಲ್‌ಡೌನ್‌ನಿಂದ ತಂದೆಯ ...

Vijaya Karnataka 28 Apr 2020, 5:00 am
ಹುಕ್ಕೇರಿ (ಬೆಳಗಾವಿ): ಕೊರೊನಾ ಸೀಲ್‌ಡೌನ್‌ನಿಂದ ತಂದೆಯ ಅಂತ್ಯ ಸಂಸ್ಕಾರಕ್ಕೂ ತೆರಳಲಾರದೇ ವಿಡಿಯೊ ಕಾಲ್‌ನಲ್ಲೇ ಪಿತನ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ಪುತ್ರಿ...
Vijaya Karnataka Web daughter mourn by seeing her fathers funeral in mobile video
ವಿಡಿಯೊ ಕಾಲ್‌ನಲ್ಲಿ ತಂದೆಯ ಅಂತ್ಯ ಸಂಸ್ಕಾರ ನೋಡಿ ಕಣ್ಣೀರಿಟ್ಟ ಪುತ್ರಿ


ತಾಲೂಕಿನ ಸಂಕೇಶ್ವರದಲ್ಲಿಇಂಥ ಒಂದು ಘಟನೆ ನಡೆಯಿತು.

ಸಂಕೇಶ್ವರ ಪಟ್ಟಣದ ಗೌಸ್‌ಮೋಹದಿನ್‌ ಹುಸೇನ ತಹಶೀಲ್ದಾರ (89) ಭಾನುವಾರ ನಿಧನರಾಗಿದ್ದಾರೆ. ಅವರ ಪುತ್ರಿ ಮಹಾರಾಷ್ಟ್ರ ಕೊಲ್ಲಾಪುರದಲ್ಲಿಪತಿಯ ಜತೆ ವಾಸವಿದ್ದಾರೆ. ತಂದೆ ನಿಧನರಾದ ಸುದ್ದಿ ತಿಳಿದರೂ ಕೊಲ್ಲಾಪುರದಿಂದ ಸಂಕೇಶ್ವರಕ್ಕೆ ತೆರಳಲು ಸಾಧ್ಯವಾಗಿಲ್ಲ. ಕೊರೊನಾ ಪಾಸಿಟಿವ್‌ ಪ್ರಕರಣದಿಂದ ಸಂಕೇಶ್ವರವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಕೊಲ್ಲಾಪುರ ನಗರದ ಸ್ಥಿತಿಯೂ ಹೀಗೆ ಇದೆ. ಈ ಕಾರಣದಿಂದ ಅವರಿಗೆ ತಂದೆಯ ಅಂತ್ಯ ಸಂಸ್ಕಾರದಲ್ಲಿಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮೊಬೈಲ್‌ನಿಂದ ವಿಡಿಯೊ ಕಾಲ್‌ ಮಾಡಿ ಮೃತ ತಂದೆಯ ಅಂತಿಮ ದರ್ಶನ - ಅಂತ್ಯ ಸಂಸ್ಕಾರದ ದೃಶ್ಯಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ