ಆ್ಯಪ್ನಗರ

ಬೆಳಗಾವಿ-ಬಾಗಲಕೋಟೆ ಹೆದ್ದಾರಿಯ ಕರಡಿಗುದ್ದಿ ಬಳಿ ಅಪಘಾತದಲ್ಲಿ ದಂಪತಿ ಸಾವು

ಬೆಳಗಾವಿ: ತಾಲೂಕಿನ ಕರಡಿಗುದ್ದಿ ಬಳಿ ಬೆಳಗಾವಿ-ಬಾಗಲಕೋಟೆ ...

Vijaya Karnataka Web 12 Aug 2020, 5:00 am
ಬೆಳಗಾವಿ: ತಾಲೂಕಿನ ಕರಡಿಗುದ್ದಿ ಬಳಿ ಬೆಳಗಾವಿ-ಬಾಗಲಕೋಟೆ ಹೆದ್ದಾರಿಯಲ್ಲಿಎರಡು ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿದಂಪತಿಗಳಿಬ್ಬರು ಮೃತಪಟ್ಟಿದ್ದಾರೆ.
Vijaya Karnataka Web death
ಸಾಂದರ್ಭಿಕ ಚಿತ್ರ


ಬೈಲಹೊಂಗಲ ತಾಲೂಕಿನ ಮೊಹರೆ ಗ್ರಾಮದ ನಾಗಪ್ಪ ಪಂಡಿತಪ್ಪ ತಿಗಡಿ (45) ಮತ್ತು ನಿರ್ಮಲಾ ನಾಗಪ್ಪ ತಿಗಡಿ (38) ಮೃತರು. ನಾಗಪ್ಪ-ನಿರ್ಮಲಾ ದಂಪತಿ ಸೋಮವಾರ ರಾತ್ರಿ ಮಾರಿಹಾಳದಿಂದ ಮೊಹರೆಗೆ ಹೋಗುವಾಗ ಕರಡಿಗುದ್ದಿ ಬಳಿ ಹಣಮನಟ್ಟಿಯ ಬಸಪ್ಪ ಭದ್ರಮ್ಮನವರ ಎನ್ನುವವರ ಬೈಕ್‌ ಡಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಾರಿಹಾಳ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ