ಆ್ಯಪ್ನಗರ

ತನ್ನದೇ ಇಲಾಖೆ ನೌಕರನಿಂದ ಲಂಚಕ್ಕೆ ಬೇಡಿಕೆ: ಪಿಡಬ್ಲ್ಯುಡಿ ಅಧಿಕಾರಿ ಎಸಿಬಿ ಬಲೆಗೆ

ಬೆಳಗಾವಿ: ತನ್ನದೇ ಇಲಾಖೆಯ ನೌಕರನಿಂದ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಶನಿವಾರ ಸಂಜೆ ...

Vijaya Karnataka 6 Jan 2019, 5:00 am
ಬೆಳಗಾವಿ : ತನ್ನದೇ ಇಲಾಖೆಯ ನೌಕರನಿಂದ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ. ಜಿಲ್ಲಾ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಅಧೀಕ್ಷಕ ರಮೇಶ್‌ ಶಂಕರ ದೇವಗೇಕರ ಬಂಧಿತ.
Vijaya Karnataka Web demand for bribery by his own department employee pwd officer acb trap
ತನ್ನದೇ ಇಲಾಖೆ ನೌಕರನಿಂದ ಲಂಚಕ್ಕೆ ಬೇಡಿಕೆ: ಪಿಡಬ್ಲ್ಯುಡಿ ಅಧಿಕಾರಿ ಎಸಿಬಿ ಬಲೆಗೆ


ಇಲಾಖೆಯ ಸುವರ್ಣ ವಿಧಾನಸೌಧ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶರಣಪ್ಪ ಈರಪ್ಪ ಮದಸನಾಳ ಅವರಿಗೆ ಸಂಬಂಧಿಸಿದ ಅರಿಯರ್ಸ್‌ ಬಿಲ್‌, ವೈದ್ಯಕೀಯ ಬಿಲ್‌ ಮರುಪಾವತಿ ಸೇರಿದಂತೆ ವರ್ಗಾವಣೆ ಆದೇಶ ನೀಡಲು ರಮೇಶ್‌ ದೇವಗೇಕರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಂಬಂಧಿಸಿದ ಕಡತಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಲಂಚದ ಹಣಕ್ಕಾಗಿ ಶರಣಪ್ಪ ಮದಸನಾಳ ಅವರನ್ನು ಪರದಾಡಿಸುತ್ತಿದ್ದರು. ಈಗಾಗಲೇ 3000 ರೂ. ಲಂಚ ಪಡೆದು, ಇನ್ನೂ 10 ಸಾವಿರ ರೂ.ಗಾಗಿ ಬೇಡಿಕೆ ಇಟ್ಟಿದ್ದರು.

ಇದರಿಂದ ನೊಂದಿದ್ದ ಎಫ್‌ಡಿಎ ಶರಣಪ್ಪ ಮದಸನಾಳ ಶನಿವಾರ ಬೆಳಗ್ಗೆ ಎಸಿಬಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸಂಜೆ ಹೊತ್ತಿಗೆ ಲೋಕೋಪಯೋಗಿ ಕಚೇರಿ ಮೇಲೆ ದಾಳಿ ನಡೆಸಿ, 10 ಸಾವಿರ ರೂ.ಲಂಚ ಪಡೆಯುವಾಗ ಸಾಕ್ಷಿ ಸಮೇತ ಆರೋಪಿ ಅಧೀಕ್ಷಕನನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಡಿವೈಎಸ್ಪಿ ಜೆ.ರಘು ಮತ್ತು ನಿರೀಕ್ಷಕರಾದ ವಿಶಾಲ ಕಬ್ಬೂರಿ, ವೈ.ಎಸ್‌. ಧರನಾಯಕ್‌ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ