ಆ್ಯಪ್ನಗರ

‘ಬರ ಪೀಡಿತ’ ಪ್ರದೇಶ ಘೋಷಣೆಗೆ ಆಗ್ರಹ

ಅಥಣಿ: ತಾಲೂಕಿನ ಉತ್ತರ ಭಾಗದ ಬಹುತೇಕ ಗ್ರಾಮಗಳು ಮಳೆ ಬಾರದೆ, ಬೆಳೆ ಬೆಳೆಯಲಾಗದೆ ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಸರಕಾರಕ್ಕೆ ಈ ...

Vijaya Karnataka 10 Oct 2018, 5:00 am
ಅಥಣಿ: ತಾಲೂಕಿನ ಉತ್ತರ ಭಾಗದ ಬಹುತೇಕ ಗ್ರಾಮಗಳು ಮಳೆ ಬಾರದೆ, ಬೆಳೆ ಬೆಳೆಯಲಾಗದೆ ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಸರಕಾರಕ್ಕೆ ಈ ಭಾಗವನ್ನು 'ಬರಪೀಡಿತ' ಎಂದು ಬರಗಾಲ ಪ್ರದೇಶವೆಂದು ಘೋಷಿಸಲು ಒತ್ತಾಯಿಸುವುದಾಗಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ತಿಳಿಸಿದರು.
Vijaya Karnataka Web BEL-09 ATHANI-04


ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳು ಸತತವಾಗಿ ಬರಗಾಲಕ್ಕೆ ಈಡಾಗುತ್ತಿವೆ. ಆದರೂ ಹಿಂದಿನ ಕಾಂಗ್ರೆಸ್‌ ಸರಕಾರವಿದ್ದಾಗ ಬಸವೇಶ್ವರ ಏತ ನೀರಾವರಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಮುಂದುವರೆದಿದ್ದು ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಿರುವದಾಗಿ ತಿಳಿಸಿದರು.

ಬರಗಾಲಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದ ಅವರು, ಗಡಿ ಭಾಗದ ಶಾಲೆಗಳಲ್ಲಿ ಸಂಬಂಧ ಪಟ್ಟ ವಿಷಯ ಶಿಕ್ಷ ಕರನ್ನು ನಿಯುಕ್ತಿಗೊಳಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಅಪ್ಪಾಸಾಬ ಅವತಾಡೆ, ಅಸ್ಲಮ್‌ ನಾಲಬಂದ, ವಿಶ್ವಸ ಪವಾರ, ಮುರೆಗೆಪ್ಪಾ ಮಗದುಮ್‌, ತುಕಾರಾಮ ಶೆಳಕೆ, ಈಶ್ವರ ಕುಂಬಾರೆ, ದಾದಾ ಪಾಟೀಲ್‌, ಆರ್‌.ಎಂ.ಪಾಟೀಲ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ