ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಆಗ್ರಹ

ಮುನವಳ್ಳಿ : ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಆಗ್ರಹಿಸಿ ಹಾಗೂ ಹಾನಿಯಾದ ...

Vijaya Karnataka 17 Sep 2019, 5:00 am
ಮುನವಳ್ಳಿ : ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಆಗ್ರಹಿಸಿ ಹಾಗೂ ಹಾನಿಯಾದ ಬಗ್ಗೆ ಮತ್ತೊಮ್ಮೆ ಸರ್ವೇ ಮಾಡಲು ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಲಾಯಿತು.
Vijaya Karnataka Web 16 MNL 3_53


ಪ್ರವಾಹದಿಂದ ಪಟ್ಟಣದಲ್ಲಿಸುಮಾರು ಹದಿನೆಂಟು ನೂರು ಮನೆಗಳು ಹಾನಿಗೊಳಗಾಗಿವೆ. ಹಾನಿಗೊಳಗಾದವರಲ್ಲಿಬಡವರು, ನೇಕಾರರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಈ ನಿಟ್ಟಿನಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿರುವ ಹತ್ತು ಸಾವಿರ ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಹೆಚ್ಚಿನ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಾನಿಗೊಳಗಾದ ಅನೇಕ ಮನೆಗಳ ಮಾಲೀಕರಿಗೆ ಇಲ್ಲಿಯವರೆಗೂ ಹಣ ಸಂದಾಯವಾಗಿಲ್ಲ. ಕೂಡಲೇ ಸರಕಾರಗಳು ಪರಿಹಾರ ನೀಡಬೇಕು. ಅಷ್ಟೇ ಅಲ್ಲ, ಹಾನಿಯಾದ ಬಗ್ಗೆ ಸರಕಾರ ಸರಿಯಾಗಿ ಸರ್ವೇ ನಡೆಸಿಲ್ಲ. ಆದ್ದರಿಂದ ಮತ್ತೊಮ್ಮೆ ಸರ್ವೇ ನಡೆಸುವಂತೆಯೂ ಒತ್ತಾಯಿಸಿ, ಕಂದಾಯ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಹಕಾರಿ ಧುರೀಣ ಉಮೇಶ ಬಾಳಿ ನೇತೃತ್ವದಲ್ಲಿಶ್ರೀ ಪಂಚಲಿಂಗೇಶ್ವರ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಪುರಸಭೆ ಸದಸ್ಯ ಪರಶುರಾಮ ಗಂಟಿ, ಶಿವಾನಂದ ಮೇಟಿ, ಅಶೋಕ ಹಾದಿಮನಿ, ಹಾರೂನ ಹುಕ್ಕೇರಿ, ಡಿ.ಡಿ.ಕಿನ್ನೂರಿ, ಅಬ್ದುಲ್‌ಸಮ್ಮದ ಹುಕ್ಕೇರಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ