ಆ್ಯಪ್ನಗರ

ಚೆಕ್‌ ಡ್ಯಾಂ, ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಗ್ರಹ

ಬೀಡಿ: ಖಾನಾಪುರ ತಾಲೂಕು ಮಂಗೇನಕೊಪ್ಪ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಚೆಕ್‌ ಡ್ಯಾಂ ಮತ್ತು ಕಾಲುವೆಗಳು ...

Vijaya Karnataka 25 Jan 2019, 5:00 am
ಬೀಡಿ: ಖಾನಾಪುರ ತಾಲೂಕು ಮಂಗೇನಕೊಪ್ಪ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಚೆಕ್‌ ಡ್ಯಾಂ ಮತ್ತು ಕಾಲುವೆಗಳು ಹಾಳಾಗಿವೆ. ಕಾಲುವೆಗಳ ಸುತ್ತ ಕಸ-ಕಡ್ಡಿ ಬೆಳೆದಿದ್ದು, ಕಾಲುವೆಗಳು ಮತ್ತು ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿವೆ. ಕಾರಣ ಶೀಘ್ರ ದುರಸ್ತಿಗೊಳಿಸುವಂತೆ ತಾಪಂ ಸದಸ್ಯ ಶಿವಪ್ಪ ಚಲವಾದಿ ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
Vijaya Karnataka Web BEL-24KHANAPUR1


ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ್ದರಿಂದ ಅವುಗಳಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಕಾಲುವೆಗಳನ್ನು ಅವಲಂಬಿಸಿ ಬೆಳೆ ಬೆಳೆದ ರೈತರ ಜಮೀನುಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಸರಕಾರದ ಲಕ್ಷ ಗಟ್ಟಲೇ ಹಣವನ್ನು ವ್ಯಯಿಸಿ ನಿರ್ಮಿಸಿದ ನೀರಾವರಿ ಯೋಜನೆಗಳು ಸರಿಯಾಗಿ ರೈತರಿಗೆ ಮುಟ್ಟಿಲ್ಲ. ಚೆಕ್‌ ಡ್ಯಾಂ ಮತ್ತು ತಡೆಗೋಡೆಗಳು ನಿರ್ವಹಣೆ ಕೊರತೆಯಿಂದ ನಲುಗಿವೆ. ಇದರಿಂದ ರೈತಾಪಿ ಸಮುದಾಯಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಇವುಗಳ ದುರಸ್ತಿಗೆ ಮುಂದಾಗಬೇಕು ಎಂದು ಅಧಿಕಾರಿಗಳನ್ನು ಅವರು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ