ಆ್ಯಪ್ನಗರ

ಗುಡ್ಡಾಪುರದಲ್ಲಿ ಶೀಘ್ರ ಕರ್ನಾಟಕ ಭವನ ನಿರ್ಮಿಸಿ

ತೆಲಸಂಗ: ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರಕಾರ ತಕ್ಷ ಣವೇ ಹಣ ಮಂಜೂರು ಮಾಡುವ ಮೂಲಕ ಶ್ರೀ ...

Vijaya Karnataka 11 Dec 2018, 5:00 am
ತೆಲಸಂಗ : ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರಕಾರ ತಕ್ಷ ಣವೇ ಹಣ ಮಂಜೂರು ಮಾಡುವ ಮೂಲಕ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಭವನ ನಿರ್ಮಿಸಿಕೊಡಬೇಕು ದಾನಮ್ಮದೇವಿ ದೇವಸ್ಥಾನ ಟ್ರಸ್ಟ್‌ ಕಮಿಟಿ ಸದಸ್ಯರಾದ ಶಂಭುಲಿಂಗ ಮಮದಾಪುರ ಒತ್ತಾಯಿಸಿದರು.
Vijaya Karnataka Web BEL-10TELSANG1


ಗುಡ್ಡಾಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಭವನ ನಿರ್ಮಾಣಕ್ಕೆ 2009ರಲ್ಲಿ ಜಾಗ ಖರೀದಿಸಿ ಕಂಪೌಂಡ್‌ ನಿರ್ಮಿಸಿಬಿಟ್ಟಿದ್ದಾರೆ. ಇಲ್ಲಿಯವರೆಗೂ ಕಟ್ಟಡ ಕಾರ್ಯ ಪ್ರಾರಂಭಿಸಿಲ್ಲ ಎಂದು ಸರಕಾರದ ಧೋರಣೆ ಬಗ್ಗೆ ಖೇದ ವ್ಯಕ್ತಪಡಿಸಿದರು.

ಭೂಗೋಳಿಕವಾಗಿ ಗುಡ್ಡಾಪುರ ಮಹಾರಾಷ್ಟ್ರದಲ್ಲಿದ್ದರೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರಲ್ಲಿ ಶೇ. 99ರಷ್ಟು ಕನ್ನಡಿಗರೇ ಇದ್ದಾರೆ. 10 ವರ್ಷಗಳ ಹಿಂದೆ ಗುಡ್ಡಾಪುರದ ದೇವಸ್ಥಾನದ ಪಕ್ಕದ ಎರಡು ಎಕರೆ ಜಾಗವನ್ನು ಖರೀದಿಸಿ ಕರ್ನಾಟಕ ಸರಕಾರಕ್ಕೆ ಕೊಡಲಾಗಿದೆ. ಆಗಿನ ಕರ್ನಾಟಕ ಸರಕಾರ 25 ಲಕ್ಷ ರೂ. ವೆಚ್ಚದಲ್ಲಿ 2 ಎಕರೆ ಜಾಗಕ್ಕೆ ಕಂಪೌಂಡ್‌ ನಿರ್ಮಿಸಿತ್ತು. ಮುಂದೆ ಸರಕಾರ ಬದಲಾದಂತೆ ಕಟ್ಟಡದ ಕೆಲಸ ಪ್ರಾರಂಭವಾಗಲೇ ಇಲ್ಲ ಎಂದರು.

ಈಗ ಕರ್ನಾಟಕ ಸರಕಾರದ ಹೆಸರಲ್ಲಿರುವ ಜಾಗದಲ್ಲಿ ಟ್ರಸ್ಟ್‌ನಿಂದ ಏನನ್ನೂ ಮಾಡಲು ಬರದಂತಿದೆ. ದೇವಸ್ಥಾನಕ್ಕೆ ಕರ್ನಾಟಕದಿಂದ ನಿತ್ಯ ಸಾವಿರಾರು ಜನ ಬರುತ್ತಾರೆ. ಛಟ್ಟಿ ಅಮಾವಾಸ್ಯೆ ಜಾತ್ರೆಗೆ 7ರಿಂದ 8 ಲಕ್ಷ ಪಾದಯಾತ್ರಿಗಳು ಆಗಮಿಸುತ್ತಾರೆ. ಕಮೀಟಿಯಿಂದ 350 ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೂ ಭಕ್ತರಿಗೆ ಉಳಿದುಕೊಳ್ಳಲು ತೊಂದರೆಯಾಗುತ್ತಿದೆ ಎಂದರು.

ಈ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಅವರನ್ನು ಭೇಟಿ ಮಾಡಿ ವಿನಂತಿಸಲಾಗಿತ್ತು. ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. 2009ರಲ್ಲಿ 12 ಕೋಟಿ ವೆಚ್ಚದ ನೀಲನಕ್ಷೆಯನ್ನು ವಿಜಯಪುರ ಲೋಕೋಪಯೋಗಿ ಎಂಜಿನಿಯರ್‌ ಕಡೆಯಿಂದ ಸರಕಾರಕ್ಕೆ ಕೊಡಲಾಗಿದೆ. ಆದರೆ ಮುಂದೆ ಯಾವುದೇ ಕೆಲಸ ಪ್ರಾರಂಭವಾಗಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ