ಆ್ಯಪ್ನಗರ

ಶಿವು ಉಪ್ಪಾರ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

ಬೆಳಗಾವಿ: ಹಿರೇಬಾಗೇವಾಡಿಯಲ್ಲಿ ಯುವಕ ಶಿವು ಉಪ್ಪಾರ ಅನುಮಾನಾಸ್ಪದ ...

Vijaya Karnataka 9 Jul 2019, 5:00 am
ಬೆಳಗಾವಿ : ಹಿರೇಬಾಗೇವಾಡಿಯಲ್ಲಿ ಯುವಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Vijaya Karnataka Web BLG-0807-2-52-8PRAMOD6


ನಗರದ ಸಿಪಿಇಡಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ''ಶಿವು ಉಪ್ಪಾರ ಮೃತಪಟ್ಟು ಇಷ್ಟು ದಿನ ಕಳೆದರೂ ಪೊಲೀಸ್‌ ಇಲಾಖೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಸಲು ಸರಕಾರ ಕಾದು ನೋಡುವ ತಂತ್ರ ಅನುಸರಿಸುತ್ತಿದೆ'', ಎಂದು ದೂರಿದರು.

''ಗೋ ಹತ್ಯೆ, ಗೋ ಅಕ್ರಮ ಸಾಗಾಟ ವಿಷಯದಲ್ಲಿ ಪ್ರತಿ ತಿಂಗಳು ಪೊಲೀಸರಿಗೆ ಹಫ್ತಾ ಹೋಗುತ್ತವೆ. ಸ್ಥಳೀಯ ಕೆಲ ಜನಪ್ರತಿನಿಧಿಗಳು, ಪಾಲಿಕೆಯ ಕೆಲ ಸದಸ್ಯರು ಗೋ ಸಾಗಣೆ ಮಾಡುವವರನ್ನು ರಕ್ಷಿಸುತ್ತಿದ್ದಾರೆ'', ಎಂದು ದೂರಿದ ಅವರು, ''ಶಿವು ಉಪ್ಪಾರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಬೆಳಗಾವಿಯಲ್ಲಿನ ಕಸಾಯಿ ಖಾನೆಗಳು ಬಂದ್‌ ಆಗಬೇಕು'', ಎಂದು ಒತ್ತಾಯಿಸಿದರು.

ಋುಷಿಕುಮಾರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಸೇವಾಲಾಲ ಸ್ವಾಮೀಜಿ ಮಾತನಾಡಿದರು. ಬಳಿಕ ಕೆಲ ಕಾರ್ಯಕರ್ತರು ಸೇನೆಯ ಬೇಡಿಕೆಗಳುಳ್ಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ವಿಷ ಸೇವಿಸಿದ ಯುವಕ :
ಸಮಾವೇಶ ನಡೆಯುವಾಗ ಯುವಕನೊಬ್ಬ ವಿಷ ಕುಡಿದು ಆತಂಕ ಸೃಷ್ಟಿಸಿದ. ರಾಯಚೂರು ಜಿಲ್ಲೆಯ ಲಿಂಗಸೂರಿನ ಚಂದ್ರಶೇಖರ ಗೌಡರ್‌ (27) ವಿಷ ಸೇವಿಸಿದ ಯುವಕ. ಈತನನ್ನು ತಕ್ಷಣ ಹಿಡಿದ ಸ್ಥಳೀಯರು ಸ್ಥಳದಲ್ಲಿಯೇ ವಾಂತಿ ಮಾಡಿಸಿದರು. ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿದ ಬಳಿಕ ಯುವಕನನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ