ಆ್ಯಪ್ನಗರ

ಜಾನಪದ ಕಲಾವಿದರಿಗೆ ಮಾಸಾಶನ ಹೆಚ್ಚಿಸಲು ಆಗ್ರಹ

ಗೋಕಾಕ : ದೇಶೀಯ ಪರಂಪರೆಯ ವಾರಸುದಾರರಾದ ಜಾನಪದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗ ನೀಡುವ ಗೌರವ ಮಾಸಾಶನವನ್ನು ಹದಿನೈದು ನೂರು ರೂ...

Vijaya Karnataka 4 Jun 2019, 5:00 am
ಗೋಕಾಕ : ದೇಶೀಯ ಪರಂಪರೆಯ ವಾರಸುದಾರರಾದ ಜಾನಪದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗ ನೀಡುವ ಗೌರವ ಮಾಸಾಶನವನ್ನು ಹದಿನೈದು ನೂರು ರೂ.ಗಳಿಂದ ಕನಿಷ್ಠ ಐದು ಸಾವಿರ ರೂ.ವರೆಗೆ ಹೆಚ್ಚಿಸಬೇಕೆಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್‌. ಬಾಲಾಜಿ ಸರಕಾರವನ್ನು ಒತ್ತಾಯಿಸಿದರು.
Vijaya Karnataka Web BEL-3GOK1


ಭಾನುವಾರ ಬಸವ ನಗರದ ನೀಲಕಂಠ ನಿಲಯದ ಸಭಾಭವನದಲ್ಲಿ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪನ ದಿನಾಚರಣೆ ಹಾಗೂ ಜಾನಪದ ವಿದ್ವಾಂಸ ಡಾ. ನಿಂಗಣ್ಣ ಸಣ್ಣಕ್ಕಿಯವರ ಹತ್ತನೇ ಪುಣ್ಯಸ್ಮರಣೋತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ನಿಂಗಣ್ಣ ಸಣ್ಣಕ್ಕಿ ಜಾನಪದ ರಾಜ್ಯ ಪ್ರಶಸ್ತಿಯನ್ನು ಮೂಡಲಗಿಯ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ, ಕುಳ್ಳೂರಿನ ಯಲ್ಲವ್ವ ಮಾದರ, ಯಾದವಾಡದ ಜಾನಪದ ಹಾಡುಗಾರ ಬಸಪ್ಪ ಇಟ್ಟಣ್ಣವರ, ಉದಗಟ್ಟಿಯ ದಟ್ಟಿಕುಣಿತ ಕಲಾವಿದ ಉದ್ದಣ್ಣ ಗೋಡೇರ ಅವರಿಗೆ, ಕ.ಜಾ.ಪ. ಉತ್ತರ ಕರ್ನಾಟಕ ಸಂಚಾಲಕ ಪ್ರೊ. ಕೆ.ಎಸ್‌. ಕೌಜಲಗಿ ಪ್ರದಾನ ಮಾಡಿದರು.

ಕಲಾವಿದ ಪ್ರಾ. ಜಯಾನಂದ ಮಾದರ ವಿಶೇಷ ಉಪನ್ಯಾಸ ನೀಡಿದರು. ಡಾ. ಪ್ರಶಾಂತ ಸಣ್ಣಕ್ಕಿ ಅಧ್ಯಕ್ಷ ತೆ ವಹಿಸಿದ್ದರು. ವಡೇರಹಟ್ಟಿಯ ಶ್ರೀ ಲಕ್ಷ್ಮೇದೇವಿ ಗಾಯನ ಸಂಘದವರಿಂದ ಡೊಳ್ಳಿನ ಪದ, ಕುಳ್ಳೂರು ಕಲಾವಿದರಿಂದ ಗೀಗೀ ಪದ ಗಾಯನ ನಡೆದವು. ಶ್ರೀಕೃಷ್ಣ ಪಾರಿಜಾತದ ಕೊರವಂಜಿ ಸನ್ನಿವೇಶ, ಶಿವಲಿಂಗ ಬಾಗೇವಾಡಿ ಪುರವಂತಿಕೆ, ಅಥಣಿಯ ಮಹಾದೇವಿ ಕಾಂಬಳೆ ಸಂಗಡಿಗರಿಂದ ಸಂಪ್ರದಾಯ ಪದ, ಶಿಂಗಳಾಪೂರದ ಪುಂಡಲೀಕ ಹರಿಜನ ಹೋಳಿ ಹುಣ್ಣಿಮೆ ಪದ, ನಾಗನೂರಿನ ಲಕ್ಷ ್ಮಣ ಕರಬನ್ನವರ ತತ್ವಪದ ಗಾಯನ ಸೇರಿದಂತೆ ಅನೇಕ ಜಾನಪದ ಕಾರ್ಯಕ್ರಮಗಳು ಜರುಗಿದವು.

ಎಮ್‌. ನಾರಾಯಣ, ಮೋಹನ ಗುಂಡ್ಲೂರ, ಲಕ್ಷ್ಮೀ ಅರೆಬೆಂಚಿ, ಬಸವರಾಜ ಕೊಪ್ಪ, ಮೂಡಲಗಿಯ ಪೋತರಾಜ ವೇದಿಕೆ ಮೇಲಿದ್ದರು. ಜಿ.ಕೆ.ಕಾಡೇಶಕುಮಾರ ಪ್ರಾರ್ಥಿಸಿದರು. ಮಕ್ಕಳ ಸಾಹಿತಿ ಲಕ್ಷ ್ಮಣ ಚೌರಿ ಸ್ವಾಗತಿಸಿದರು. ಉಪನ್ಯಾಸಕ ಚೇತನ ಜೋಗನ್ನವರ ನಿರೂಪಿಸಿದರು. ನ್ಯಾಯವಾದಿ ಬಲದೇವ ಸಣ್ಣಕ್ಕಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ