ಆ್ಯಪ್ನಗರ

ಪ್ರತಿದಿನ ಟ್ಯಾಂಕರ್‌ ನೀರು ಪೂರೈಸುವಂತೆ ಆಗ್ರಹ

ತೆಲಸಂಗ: ಸಮೀಪದ ಹಾಲಳ್ಳಿ ಗ್ರಾಮದ ಬ್ಯಾಡರಟ್ಟಿ ಹಾಗೂ ನ್ಯಾಮಗೌಡರ ಓಣಿಗಳಿಗೆ ಪ್ರತಿದಿನ ಟ್ಯಾಂಕರ್‌ ನೀರು ಪೂರೈಸದಿದ್ದರೆ ಹೋರಾಟ ಅನಿವಾರ್ಯ ಎಂದು ಕರ್ನಾಟಕ ...

Vijaya Karnataka 10 Jun 2019, 5:00 am
ತೆಲಸಂಗ: ಸಮೀಪದ ಹಾಲಳ್ಳಿ ಗ್ರಾಮದ ಬ್ಯಾಡರಟ್ಟಿ ಹಾಗೂ ನ್ಯಾಮಗೌಡರ ಓಣಿಗಳಿಗೆ ಪ್ರತಿದಿನ ಟ್ಯಾಂಕರ್‌ ನೀರು ಪೂರೈಸದಿದ್ದರೆ ಹೋರಾಟ ಅನಿವಾರ್ಯ ಎಂದು ಕರ್ನಾಟಕ ವಿಶ್ವನಿರ್ಮಾಣ ಸೇನೆ ಅಥಣಿ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಹೊನಗೌಡ ಎಚ್ಚರಿಸಿದ್ದಾರೆ.
Vijaya Karnataka Web BEL-9TELSANG1


ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಓಣಿಗಳಲ್ಲಿ ನಾಲ್ಕು ದಿನಗಳಿಗೊಮ್ಮೆ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಲಳ್ಳಿ ಗ್ರಾಮದಲ್ಲೆಡೆ ಕುಡಿಯುವ ನೀರಿಗಾಗಿ ನಿರ್ಮಾಣವಾಗಿರುವ ಯಾವೊಂದು ಜಲಕುಂಭಕ್ಕೆ ನಳಗಳಿಲ್ಲ, ಪೈಪ್‌ಲೈನ್‌ ಇಲ್ಲ. ಕುಂಭದಲ್ಲಿ ನೀರು ತುಂಬುವ ಕೆಲಸವೂ ನಡೆಯುತ್ತಿಲ್ಲ. ಬರಗಾಲದಿಂದ ಜನ ತತ್ತರಿಸಿ ಹೋಗಿದ್ದರೂ ಅಧಿಕಾರಿಗಳು ಬರನಿರ್ವಹಣೆಯ ಅಪೂರ್ಣ ಕೆಲಸ ಮಾಡಿ ಕೈತೊಳೆದುಕೊಂಡು ಬಿಟ್ಟಿದ್ದಾರೆ. ನೀರು ಕೊಡುವ ಪ್ರಾಮಾಣಿಕ ಕೆಲಸ ಅಧಿಕಾರಿಗಳಿಂದ ಆಗಿಲ್ಲ ಎಂದು ದೂರಿದ್ದಾರೆ.

ಗಟಾರ ಸ್ವಚ್ಛಗೊಳಿಸಿ :
ಗ್ರಾಮದಲ್ಲಿ ಬಚ್ಚಲು ನೀರು ಹರಿದು ಹೋಗುವ ಗಟಾರದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ತೊಂದರೆಯಾಗಿದೆ. ಇದರಿಂದಾಗಿ ಇಲ್ಲಿ ವಾಸಿಸುವ ಜನರಿಗೆ ಗಟಾರದ ಗಬ್ಬು ವಾಸನೆ ಹಾಗೂ ಸೊಳ್ಳೆ ಕಾಟ ಹೆಚ್ಚಾಗಿದೆ. ಈ ಹಿಂದೆ ಮನವಿ ಮಾಡಿದಾಗ ತುರ್ತಾಗಿ ಗಟಾರ ದುರಸ್ತಿ ಹಾಗೂ ಸ್ವಚ್ಛ ಮಾಡಿಕೊಡುವುದಾಗಿ ಹೇಳಿದ್ದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಸದ್ಯ ಸಾಂಕ್ರಾಮಿಕ ರೋಗಗಳ ಭೀತಿಯ ಜತೆಗೆ ನೀರಿನ ಸಮಸ್ಯೆ ಎದುರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ ಎಂದ ಹೊನಗೌಡ ಅವರು ಗ್ರಾಮದ ಬೇಡಿಕೆಗಳನ್ನು ಈಡೇರಿಸದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ