ಆ್ಯಪ್ನಗರ

ಜಿಪಂ ಅಧ್ಯಕ್ಷೆ ಒಡೆತನದ ಸಂಸ್ಥೆ ವಿರುದ್ಧ ತನಿಖೆಗೆ ಆಗ್ರಹ

ಬೆಳಗಾವಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಅವರ ಪತಿ ಪ್ರಶಾಂತ ಐಹೊಳೆ ಒಡೆತನದ ...

Vijaya Karnataka 18 Dec 2018, 5:00 am
ಬೆಳಗಾವಿ : ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಅವರ ಪತಿ ಪ್ರಶಾಂತ ಐಹೊಳೆ ಒಡೆತನದ ಮಹಾಲಕ್ಷ್ಮೀ ಮಲ್ಟಿ ಹಾಗೂ ಡಿಸ್ಟ್ರಿಕ್ಟ್ ಪ್ರೈವೇಟ್‌ ಸಂಸ್ಥೆಯಲ್ಲಿ ಇಟ್ಟ ಠೇವಣಿ ಮರಳಿ ಕೊಡಿಸುವಂತೆ ಆಗ್ರಹಿಸಿ ಸೋಮವಾರ ಗ್ರಾಹಕರು ಸುವರ್ಣ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಿದರು.
Vijaya Karnataka Web BEL-17 LBS 10


ಬೆಳಗ್ಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪ್ರತಿಭಟನೆ ನಡೆಸಿದ ಗ್ರಾಹಕರು ನಂತರ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು. ಅಥಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಯಲ್ಲಿ ಕೋಟ್ಯಂತರ ರೂ. ಹಣವನ್ನು ಗ್ರಾಹಕರು ಠೇವಣಿ ಇಟ್ಟದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ, ಪಟ್ಟಣಕುಡಿ, ಜಳಗಾಂವ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ನಿಪ್ಪಾಣಿ, ರಾಮಪುರ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅನೇಕ ಗ್ರಾಹಕರು ಠೇವಣಿ ಮಾಡಿದ್ದಾರೆ. ಈಗ ಹಣ ಕೇಳಲು ಹೋದರೆ ವಾಪಸ್ಸು ಕೊಡುತ್ತಿಲ್ಲ. ಹಲವು ಬಾರಿ ಹಣ ಮರಳಿಸುವಂತೆ ಆಶಾ ಐಹೊಳೆ ಹಾಗೂ ಪ್ರಶಾಂತ ಐಹೊಳೆ ಅವರನ್ನು ಕೇಳಿಕೊಂಡರು ಪ್ರಯೋಜನೆಯಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರ ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಸ್ಥೆಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರಶಾಂತ ಮಾನೆ, ರೂಪಾಲಿ ಖೋತ, ಶಂಕರ ಖೋತ, ಶಿಲ್ಪಾ ಪಾಟೀಲ, ಸಂಜಯ ಪರೀಟ, ಶ್ರೀಧರ ಪೂಜೇರಿ, ವಸಂತ ದಳವಿ, ಶ್ರೀಪತಿ ಲವಟೆ, ಆನಂದಾ ವಾಳ್ವೇಕರ, ಪ್ರಕಾಶ ಖಾಡೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ