ಆ್ಯಪ್ನಗರ

ನೆರೆ ಪೀಡಿತ ಪ್ರದೇಶದ ರೈತರ ಸಾಲ ಮನ್ನಾಕ್ಕೆ ಆಗ್ರಹ

ಯಕ್ಸಂಬಾ: ಗಡಿಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ...

Vijaya Karnataka 5 Aug 2019, 5:00 am
ಯಕ್ಸಂಬಾ: ಗಡಿಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳ ಪ್ರವಾಹದಿಂದ ನದಿ ತೀರದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶಗೊಂಡಿದ್ದು ಈ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ತಾಪಂ ಸದಸ್ಯ ಹಾಗೂ ಮಾಜಿ ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಮಿರ್ಜೆ ಆಗ್ರಹಿಸಿದರು.
Vijaya Karnataka Web BEL-4EXA9


ಅವರು ಕಲ್ಲೋಳ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಬೆಳೆದ ಶೇಂಗಾ, ಕಬ್ಬು, ಸೋಯಾ ಅವರೆ, ಮೆಣಸಿನಕಾಯಿ ಸೇರಿದಂತೆ ಫಲವತ್ತಾಗಿ ಬೆಳೆದ ಬೆಳೆಗಳಿಗೆ ಪ್ರವಾಹದ ನೀರು ನುಗ್ಗಿ ಆಪಾರ ಹಾನಿಯುಂಟಾಗಿದೆ. ಸಾವಿರಾರು ಎಕರೆಯಲ್ಲಿ 18 ತಿಂಗಳ ಬೆಳೆಗಳಾದ ಕಬ್ಬು ಮತ್ತಿತರ ವಾಣಿಜ್ಯ ಬೆಳೆಗಳೂ ನಾಶವಾಗಿವೆ ಎಂದರು.

ಸಾಲ ಮಾಡಿ ರೈತರು ಬೆಳೆಗಳನ್ನು ಬೆಳೆಯುತ್ತಿದ್ದು ತಿಂಗಳುಗಟ್ಟಲೇ ಪ್ರವಾಹದ ನೀರು ನಿಂತು ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ಪುನಃ ಬೆಳೆಗಳನ್ನು ನಾಟಿ ಮಾಡಬೇಕಾಗುತ್ತದೆ. ಸಾಲ ಮಾಡಿ ನಾಟಿ ಮಾಡಿದ ಬೆಳೆಗಳಿಗೆ ಯೋಗ್ಯ ಬೆಲೆ ಕೂಡ ಸಿಗದೇ ರೈತರು ಸಾಲದ ಸುಳಿಯಲ್ಲಿ ಸಿಗಬೇಕಾಗುತ್ತದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಹದಿಂದ ತತ್ತರಿಸಿದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ