ಆ್ಯಪ್ನಗರ

ಪಾಮಲದಿನ್ನಿಯಲ್ಲಿ ಪ್ರಾರ್ಥನಾ ಸ್ಥಳ ನಾಶ

ಘಟಪ್ರಭಾ: ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿನ ವಡ್ಡರ ...

Vijaya Karnataka 24 Nov 2019, 5:00 am
ಘಟಪ್ರಭಾ: ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿನ ವಡ್ಡರ ಸಮುದಾಯದ ದುರ್ಗಾದೇವಿ ಗುಡಿಯ ಪೂಜಾ ಸಾಮಗ್ರಿ ಸಂಗ್ರಹ ಸ್ಥಳ ಹಾಗೂ ದೇವರ ಜಗುಲಿ ನಾಶ ಪಡಿಸಿ, ಸಮುದಾಯದ ಮುಖಂಡರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.
Vijaya Karnataka Web destruction of the place of worship at pamaladinni
ಪಾಮಲದಿನ್ನಿಯಲ್ಲಿ ಪ್ರಾರ್ಥನಾ ಸ್ಥಳ ನಾಶ


ಗ್ರಾಮದಲ್ಲಿ150ಕ್ಕೂ ಹೆಚ್ಚು ಮನೆತನದ ವಡ್ಡರ ಜನಾಂಗ ಕಳೆದ 30 ವರ್ಷಗಳಿಂದ ದುರ್ಗಾದೇವಿ ಪೂಜೆ ಮಾಡುತ್ತಿದೆ. ದುರ್ಗಾದೇವಿ ಗುಡಿಯ ಹತ್ತಿರ ದೇವಿಯ ಪ್ರಾರ್ಥನಾ ಮಂದಿರದ ಉಪಯೋಗಕ್ಕಾಗಿ ಸಮುದಾಯದ ಪೂರ್ವಜರು ಜಾಗ ನೀಡಿದ್ದು, ಅಲ್ಲಿಪೂಜಾ ಸಾಮಗ್ರಿ ಹಾಗೂ ದೇವರ ಜಗುಲಿ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, 20 ದಿನಗಳ ಹಿಂದೆ ದುರ್ಗಾದೇವಿ ಗುಡಿ ಹತ್ತಿರದ ಜಮೀನಿನ ಮಾಲೀಕ, ಆ ಸ್ಥಳ ನಮಗೆ ಬರುತ್ತದೆ ಎಂದು ಜೆಸಿಬಿ ಯಂತ್ರದಿಂದ ಪೂಜಾ ಸ್ಥಳವನ್ನು ನಾಶ ಮಾಡಿದ್ದಾರೆ. ಈ ವೇಳೆ ತಡೆಯಲು ಹೋದ ವಡ್ಡರ ಮುಖಂಡರಿಗೆ, ವಡ್ಡರ ಪ್ರಾರ್ಥನ ಸ್ಥಳ ಊರಲ್ಲಿಬೇಡ, ನೀವು ಊರಿಂದ ಹೊರಗಡೆ ಹೋಗಿ. ನಮ್ಮನ್ನು ತಡೆಯಲು ಬಂದರೆ ಜೆಸಿಬಿ ಯಂತ್ರದಿಂದ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ವಡ್ಡರ ಸಮುದಾಯದ ಮುಖಂಡರಾದ ಯಮುನೂರ ಹಾಗೂ ನಾಗಪ್ಪ ದೂರು ದಾಖಲಿಸಿದ್ದಾರೆ. ಬಾಳಪ್ಪ ದಂಡಿನ, ಬಸಪ್ಪ ಹಳ್ಳೂರು, ನೀಲವ್ವಾ ದಂಡಿನ ಹಾಗೂ ಜೆಸಿಬಿ ಯಂತ್ರದ ಚಾಲಕ ಚಂಗು ರಾಜಾಪುರೆ ಎಂಬುವರ ವಿರುದ್ಧ ದೂರು ನೀಡಿದ್ದಾರೆ.

ದೂರು ನೀಡಿ ಹಲವು ದಿನಗಳಾಗಿದ್ದರೂ ಎರಡು ದಿನಗಳ ಹಿಂದಷ್ಟೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ಬಗ್ಗೆ ಜಿಲ್ಲಾಮಟ್ಟದಲ್ಲಿಪ್ರತಿಭಟನೆ ನಡೆಸುತ್ತೇವೆ.
- ಸಂಜು ಗಾಡಿವಡ್ಡರ, ವಡ್ಡರ ಸಮುದಾಯದ ಮುಖಂಡ

ಪ್ರಕರಣ ದಾಖಲಾಗಿ ಕೆಲ ದಿನ ಮಾತ್ರವಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕೂಡಲೇ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
-ಲಕ್ಷಣ ನಿಂಬರಗಿ, ಎಸ್‌ಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ