ಆ್ಯಪ್ನಗರ

ಜಿಂಕೆ ಹತ್ಯೆ ಮಾಡಿದ 8 ಜನರ ಬಂಧನ

ಖಾನಾಪುರ/ ಚನ್ನಮ್ಮನ ಕಿತ್ತೂರು ಜಿಂಕೆ ಹತ್ಯೆ ಮಾಡಿದ ಹಾಗೂ ಜಿಂಕೆ ಮಾಂಸ ...

Vijaya Karnataka 17 Jan 2020, 5:00 am
ಖಾನಾಪುರ/ ಚನ್ನಮ್ಮನ ಕಿತ್ತೂರು: ಜಿಂಕೆ ಹತ್ಯೆ ಮಾಡಿದ ಹಾಗೂ ಜಿಂಕೆ ಮಾಂಸ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web 17KTR2074841
ಜಿಂಕೆಯನ್ನು ಬೇಟೆಯಾಡಿದ ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ.


ಜಿಂಕೆ ಹತ್ಯೆ ಮಾಡಿದ ಪ್ರಕರಣದಲ್ಲಿಕಿತ್ತೂರು ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಸಿದ್ಧಲಿಂಗೇಶ್ವರ ಮಗದುಮ ಆರೋಪಿಗಳನ್ನು ಬಂಧಿಸಿದ್ದಾರೆ. ಕಿತ್ತೂರಿನ ಸೋಮವಾರ ಪೇಟೆಯ ಬಸವರಾಜ ಕೊಳೆಪ್ಪ ವಡ್ಡರ(48), ಗಂಗಪ್ಪ ವಸ್ತ್ರಪ್ಪ ಕಲ್ಲವಡ್ಡರ(24), ಹಣಮಂತ ದುರ್ಗಪ್ಪ ಕಲ್ಲವಡ್ಡರ(38) ಹಾಗೂ ಸುನಿಲ್‌ ಹನುಹಂತ ಮಣ್ಣಿನವಡ್ಡರ(29) ಬಂಧಿತರು.

ಕಿತ್ತೂರು ವರದಿ: ಬೇಟೆಯಾಡಿ ಸಾಯಿಸಿದ ಜಿಂಕೆಯನ್ನು ದ್ವಿಚಕ್ರ ವಾಹನದ ಮೇಲೆ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜಿಂಕೆಯನ್ನು ಬೇಟೆಯಾಡಿದ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಭರಮಪ್ಪ ಹನುಮಂತ ಭಜಂತ್ರಿ (28), ಮಲ್ಲೇಶ ಹನುಮಂತ ಭಜಂತ್ರಿ (24) ಬಂಧಿತರು. ಇನ್ನೋರ್ವ ಆರೋಪಿ ಕಿತ್ತೂರಿನ ಯುವರಾಜ ಬಸಪ್ಪ ಭಜಂತ್ರಿ (35) ಪರಾರಿಯಾಗಿದ್ದಾನೆ. ಮೋಟರ್‌ ಬೈಕ್‌, ಎರಡು ಬ್ಲಾಂಕೆಟ್‌, ಮೂರು ಬಲೆಗಳು, ಒಂದು ಚೀಲ ಹಾಗೂ ಮಚ್ಚನ್ನು ಆರೋಪಿಗಳಿಂದ ವಶ ಪಡಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ