ಆ್ಯಪ್ನಗರ

ಪ್ರೇಮಿಗಳ ಸುಲಿಗೆಕೋರರ ಬಂಧನ

ಪ್ರೇಮಿಗಳ ಸುಲಿಗೆಕೋರರ ಬಂಧನ ...

Vijaya Karnataka 28 Sep 2019, 5:00 am
ಬೆಳಗಾವಿ: ವಿಹಾರಕ್ಕೆ ತೆರಳುತ್ತಿದ್ದ ಪ್ರೇಮಿಗಳನ್ನು ತಡೆದು ಸುಲಿಗೆ ಮಾಡುತ್ತಿದ್ದ ಕಳ್ಳರನ್ನು ಶುಕ್ರವಾರ ಕಾಕತಿ ಠಾಣೆ ಪೊಲೀಸರು ಬಂಧಿಸಿ, ಆರೋಪಿಗಳಿಂದ 2.68ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
Vijaya Karnataka Web 27KAKATI083609


ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ಕೆಂಚಪ್ಪ ನಾಯಿಕ (25) ಹಾಗೂ ಬೈಲೂರ ಗ್ರಾಮದ ಲಗಮಪ್ಪ ನಾಯಿಕ (24) ಬಂಧಿತರು. ಇನ್ನಿಬ್ಬರು ಆರೋಪಿಗಳಾದ ಸೋನಟ್ಟಿ ಗ್ರಾಮದ ಬಾಳೇಶ ಹುಲ್ಲಪ್ಪ ನಾಯಿಕ ಮತ್ತು ನಾಗಪ್ಪ ಉಫ್‌ರ್‍ ಪಿಂಟು ಭೀಮಪ್ಪ ಕರವಿನಕೊಪ್ಪ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಸೆ.22ರಂದು ರಾತ್ರಿ 8 ಗಂಟೆ ಸಮಯದಲ್ಲಿಇಲ್ಲಿನ ನ್ಯೂಗಾಂಧಿ ನಗರದ ಅಸೀಫ್‌ ಅಬ್ದುಲ ಸಯ್ಯದ ಎಂಬುವವರು ಮದುವೆಯಾಗಲಿರುವ ಸಂಗಾತಿಯೊಂದಿಗೆ ಬೈಕ್‌ನಲ್ಲಿ ಕಾಕತಿ ಕಡೆಗೆ ಹೋಗುವಾಗ ಆರೋಪಿಗಳು ಅಡ್ಡಗಟ್ಟಿ ಹಲ್ಲೆನಡೆಸಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಆಸೀಫ್‌ ಬಳಿ ಇದ್ದ 6 ಗ್ರಾಂ ತೂಕದ ಚಿನ್ನದ ಉಂಗುರ, ಆಸೀಫ್‌ ಸಂಗಾತಿ ಬಳಿಯಿದ್ದ 15 ಗ್ರಾಂ ತೂಕದ ಸರ ಮತ್ತು ಕಿವಿಯೋಲೆ, 8 ಸಾವಿರ ರೂ. ನಗದು ಸೇರಿದಂತೆ ಒಟ್ಟು 98 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಆಸೀಫ್‌ ಸಯ್ಯದ ಕಾಕತಿ ಪೊಲೀಸ್‌ ಠಾಣೆಯಲ್ಲಿಸೆ.26 ರಂದು ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಕಾಕತಿ ಠಾಣೆ ಪೊಲೀಸರು ಶುಕ್ರವಾರ ಕೆಂಚಪ್ಪ ನಾಯಿಕ ಮತ್ತು ಲಗಮಪ್ಪ ನಾಯಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ತಮ್ಮೊಂದಿಗಿದ್ದ ಇನ್ನಿತರ ಆರೋಪಿಗಳಾದ ಬಾಳೇಶ್‌ ನಾಯಿಕ, ನಾಗಪ್ಪ ಕರವಿನಕೊಪ್ಪ ಎನ್ನುವವರ ಕುರಿತೂ ಮಾಹಿತಿ ನೀಡಿದ್ದಾರೆ. ಆರೋಪಿಗಳ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಮತ್ತು 1.70 ಲಕ್ಷ ರೂ. ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆ ಮರೆಯಿಸಿಕೊಂಡಿರುವ ಇನ್ನಿಬ್ಬರ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರ ಪ್ರಕಟಣೆ ತಿಳಿಸಿದೆ.

ಕಾರ್ಯಾಚರಣೆಯಲ್ಲಿಕಾಕತಿ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಶ್ರೀಶೈಲ ಕೌಜಲಗಿ, ಪಿಎಸ್‌ಐ ಎಂ.ಜಿ. ಭಜಂತ್ರಿ, ಸಿಬ್ಬಂದಿಗಳಾದ ಎ.ಬಿ. ಕುಂಡೇದ, ಬಿ.ಎಸ್‌. ನಾಗನ್ನವರ, ಬಿ.ಸಿ. ಗುನ್ನಗೋಳ, ಎಂ.ಡಿ. ಪೂಜೇರಿ, ವೈ.ಎಲ…. ಮುರಗಟ್ಟಿ, ವಿಠ್ಠಲ ಪಟ್ಟೇದ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ