ಆ್ಯಪ್ನಗರ

ಇಂಗಳಿ ಮಾದರಿ ಗ್ರಾಮವನ್ನಾಗಿಸಲು ಸಂಕಲ್ಪ

ಇಂಗಳಿ: ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಇಂಗಳಿ ಗ್ರಾಮಕ್ಕೆ ರಾಜ್ಯ ಸರಕಾರದ ಎಲ್ಲ ಯೋಜನೆಗಳನ್ನು ತಂದು ಮಾದರಿ ಗ್ರಾಮವನ್ನಾಗಿಸಲು ಪಣ ...

Vijaya Karnataka 2 Jul 2019, 5:00 am
ಇಂಗಳಿ: ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಇಂಗಳಿ ಗ್ರಾಮಕ್ಕೆ ರಾಜ್ಯ ಸರಕಾರದ ಎಲ್ಲ ಯೋಜನೆಗಳನ್ನು ತಂದು ಮಾದರಿ ಗ್ರಾಮವನ್ನಾಗಿಸಲು ಪಣ ತೊಡಲಾಗಿದೆ ಎಂದು ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಹೇಳಿದರು.
Vijaya Karnataka Web BEL-1INGALI1


ಅವರು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ರಾಜ್ಯ ಸರಕಾರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ಸುಮಾರು 1 ಕೋಟಿ ರೂ. ವೆಚ್ಚದ ರಸ್ತೆ ಚರಂಡಿ ಕುಡಿಯುವ ನೀರು ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ರಮೇಶ ಪವಾರ, ಗಣಪತಿ ಧನವಾಡೆ, ಸಂಜಯ ಕುಡಚೆ, ಸತ್ಯಪ್ಪ ಕಬಾಡಗೆ, ಪ್ರಭಾಕರ ಭೀಮಣ್ಣವರ, ಅಣ್ಣಾಸಾಹೇಬ ಪವಾರ, ಶಂಕರ ಅಂಬಿ, ಗಣಪತಿ ಚೌಗಲೆ, ರಾಜು ಇಂಗಳೆ, ಸುಧೀರ ಮೋರೆ, ಬಸ್ಸಪ್ಪ ಮಿರ್ಜೆ, ಸಂಜಯ ಜಾದವ, ಬಾಬು ಮಿರ್ಜೆ, ಹೂವಣ್ಣಾ ಚೌಗಲೆ, ಅರುಣ ಬಾಮನೆ, ರಮೇಶ ಮುರಚಿಟ್ಟೆ, ಶಿವಾಜಿ ಜಾಧವ, ಭೂಪಾಲ ಪಣದೆ, ಸುರೇಶ ಢಾಕಣಾಯಿಕ, ಆನಂದ ಮಾನೆ, ಮಹಾದೇವ ಜೂಗದಾರ, ರಾಜು ಕೋಳಿ, ಬಾಳಾಸಾಹೇಬ ಟಿಕ್ಕೆ ಇನ್ನಿತರರು ಹಾಜರಿದ್ದರು ಗುತ್ತಿಗೆದಾರ ಎಸ್‌.ಎಂ. ಜಮಾದಾರ ಸ್ವಾಗತಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ