ಆ್ಯಪ್ನಗರ

ಸ್ಮಶಾನದಲ್ಲೇ ಧರಣಿ; ಮೂಲ ಸೌಕರ್ಯಕ್ಕೆ ಒತ್ತಾಯ

ಬೆಳಗಾವಿ: ಇಲ್ಲಿನ ಚಿದಂಬರ ನಗರ ಪ್ರದೇಶದಲ್ಲಿರುವ ಅನಗೋಳ ಸ್ಮಶಾನ ಭೂಮಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರ ಸೇವಕರಾದ ವಿನಾಯಕ ಗುಂಜಟಕರ್‌, ಅನಿಲ ...

Vijaya Karnataka 15 Aug 2018, 5:00 am
ಬೆಳಗಾವಿ: ಇಲ್ಲಿನ ಚಿದಂಬರ ನಗರ ಪ್ರದೇಶದಲ್ಲಿರುವ ಅನಗೋಳ ಸ್ಮಶಾನ ಭೂಮಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರ ಸೇವಕರಾದ ವಿನಾಯಕ ಗುಂಜಟಕರ್‌, ಅನಿಲ ಮುಚ್ಚಂಡೀಕರ್‌ ಹಾಗೂ ಸಾರ್ವಜನಿಕರು ಮಂಗಳವಾರ ಸ್ಮಶಾನದಲ್ಲೇ ಧರಣಿ ಸತ್ಯಾಗ್ರಹ ನಡೆಸಿ ಪಾಲಿಕೆ ಆಡಳಿತ ವ್ಯವಸ್ಥೆಯ ಗಮನ ಸೆಳೆದರು.
Vijaya Karnataka Web BLG-1408-2-52-14RAJU-15


ಬೆಳಗ್ಗೆ 11 ರಿಂದ ಮಧ್ಯಾಹ್ನ 2.30ರವರೆಗೆ ನಡೆದ ಧರಣಿಯಲ್ಲಿ ಸುತ್ತಲಿನ ಬಡಾವಣೆಗಳ ಜನರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶವ ದಹನ ಸ್ಥಳದ ಮೇಲಿನ ತಗಡಿನ ಹೊದಿಕೆ ಹಾಳಾಗಿದ್ದು, ಬೀಳುವ ಸ್ಥಿತಿಯಲ್ಲಿದೆ. ವಿದ್ಯುತ್‌, ನೀರಿನ ಸಮಸ್ಯೆಯೂ ಇದೆ. ಈ ಕುರಿತು ಆರು ತಿಂಗಳಿನಿಂದ ಹೇಳುತ್ತಿದ್ದರೂ ಯಾರೂ ಕಿವಿಗೊಡುತ್ತಿಲ್ಲ. ಸ್ವತಃ ಮೇಯರ್‌, ಉಪಮೇಯರ್‌, ಆಯುಕ್ತರು ಹಾಗೂ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಉಪಮೇಯರ್‌ ಮಧುಶ್ರೀ ಪೂಜಾರ 15 ದಿನಗಳೊಳಗಾಗಿ ಸ್ಮಶಾನಕ್ಕೆ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿ ಪ್ರತಿಭಟನೆ ಅಂತ್ಯಗೊಳಿಸಿದರು.

ಭಾವು ಕಾವಳೆ, ಪ್ರಫುಲ್‌ ಸೋಮನಾಚೆ, ಜ್ಯೋತಿಬಾ ಲಾಟೂಕರ್‌, ರಾಜು ಪವಾರ, ಬಾಳೇಶ ಬಿರ್ಜೆ, ಚಾಂಗದೇವ ಮುತಗೇಕರ್‌, ಸುಂದರ ಜಾಧವ, ಬಾಳು ರೇಡೇಕರ್‌, ವಿಶಾಲ ಬಿಸೆ, ಸಮೃದ್ಧ ಜಾಧವ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ