ಆ್ಯಪ್ನಗರ

ತ್ರಿವಳಿ ನಗರಗಳಿಗೆ ನೇರ ರೈಲು ಸಂಪರ್ಕ ಜಾಲ

ಬೆಳಗಾವಿ : ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಮಹಾನಗರಗಳ ನಡುವೆ ...

Vijaya Karnataka 28 Jul 2019, 5:00 am
ಬೆಳಗಾವಿ : ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಮಹಾನಗರಗಳ ನಡುವೆ ಸಂಪರ್ಕ ಕೊಂಡಿಯಾಗಿ ನೇರ ರೈಲು ಸಂಪರ್ಕ ಜಾಲ ನಿರ್ಮಿಸಲು ಉನ್ನತ ತಂತ್ರಜ್ಞರ ಸಮಿತಿ ನೇಮಿಸಿದ್ದು, ಅದು ಅಧ್ಯಯನ ನಡೆಸಿದೆ. ಇದರ ವರದಿ ಬಂದ ನಂತರ ಪರಿಶೀಲಿಸಿ ವಿಸ್ತೃತ ಯೋಜನೆ ರೂಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯಸಚಿವ ಸುರೇಶ್‌ ಅಂಗಡಿ ಹೇಳಿದ್ದಾರೆ.
Vijaya Karnataka Web direct rail connectivity to triple cities
ತ್ರಿವಳಿ ನಗರಗಳಿಗೆ ನೇರ ರೈಲು ಸಂಪರ್ಕ ಜಾಲ


ಇಲ್ಲಿನ ಕಂಟೋನ್ಮೆಂಟ್‌ ಬೋರ್ಡ್‌ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ''ಇದು ನಮ್ಮ ಕನಸಿನ ಯೋಜನೆ. ಈ ತ್ರಿವಳಿ ನಗರಗಳ ನಡುವೆ ರೈಲು ಸಂಪರ್ಕ ಜಾಲ ಹೆಣೆಯಲ್ಪಟ್ಟು ಬುಲೆಟ್‌ ಟ್ರೇನ್‌ ತರಹ ಸಂಚಾರ ಆರಂಭಗೊಂಡರೆ ಕೈಗಾರಿಕೆಗಳ ಸ್ಥಾಪನೆ ಮತ್ತು ಅವುಗಳ ಬೆಳವಣಿಗೆ, ಉದ್ಯೋಗ ಸೃಷ್ಟಿ, ವಾಣಿಜ್ಯ ವಹಿವಾಟು, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗುತ್ತದೆ. ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಇದರ ಲಾಭ ದೊರೆಯಲಿದೆ'', ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ಜಾಗದ ಸಮಸ್ಯೆ ಕಾರಣಕ್ಕೆ ಕಂಟೋನ್ಮೆಂಟ್‌ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣುತ್ತಿಲ್ಲವೆಂಬ ಆರೋಪವಿದೆ. ಕಂಟೋನ್ಮೆಂಟ್‌ ವ್ಯಾಪ್ತಿಯಲ್ಲಿ ಪಡೆದುಕೊಳ್ಳುವಷ್ಟು ಜಾಗವನ್ನು ರಾಜ್ಯ ಸರಕಾರ ಅವರಿಗೆ ಬೇರೆ ಕಡೆಗೆ ನೀಡಬೇಕು. ಈ ಮೂಲಕ ಅಲ್ಲಿನ ಸಮಸ್ಯೆ ಬಗೆಹರಿಸಿ ಕಾಮಗಾರಿಗಳಿಗೆ ಚುರುಕು ನೀಡಬೇಕು'', ಎಂದು ಅವರು ಒತ್ತಾಯಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಉಪಸ್ಥಿತರಿದ್ದರು.

ರಿಂಗ್‌ ರಸ್ತೆಗಾಗಿ ಸಭೆ :
''ಬೆಳಗಾವಿ ನಗರದ ಟ್ರಾಫಿಕ್‌ ಸಮಸ್ಯೆ ಬಗೆಹರಿಯಲು ರಿಂಗ್‌ ರಸ್ತೆ ಕಾಮಗಾರಿ ನಿರೀಕ್ಷೆಯಂತೆ ನಡೆಯಬೇಕಿದೆ. ಆದರೆ, ಭೂಸ್ವಾಧೀನ ವಿಚಾರವಾಗಿ ರೈತರ ಆಕ್ಷೇಪಗಳಿವೆ. ಜಿಲ್ಲಾಧಿಕಾರಿಗಳು ಇದಕ್ಕೆ ಸ್ಪಂದಿಸಿ ರೈತರಿಗೆ ಪರಿಹಾರ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಈ ನಿಟ್ಟಿನಲ್ಲಿ ನಗರ ಸಂಬಂಧಿತ ಶಾಸಕರು, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಒಳಗೊಂಡಂತೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು'', ಎಂದು ಸಚಿವ ಅಂಗಡಿ ತಿಳಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಎಸ್‌. ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸುವ ಪೂರ್ಣವಿಶ್ವಾಸವಿದೆ. ಇವರಿಂದ ಜನಪರ ಆಡಳಿತ ಸಿಗಲಿದೆ. ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ನಾಲ್ಕು ಸಚಿವ ಸ್ಥಾನ ನೀಡಬೇಕೆಂದು ಅಪೇಕ್ಷೆ ಪಡುತ್ತೇನೆ.
- ಸುರೇಶ್‌ ಅಂಗಡಿ, ಕೇಂದ್ರ ಸಚಿವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ