ಆ್ಯಪ್ನಗರ

ಸಹಕರಿಸದಿದ್ದರೆ ಸೇನಾ ಪಡೆ ಬಳಸಿ ಸ್ಥಳಾಂತರ

ಕಾಗವಾಡ: ಭಾರಿ ಮಳೆಯಿಂದ ಕೃಷ್ಣಾ ನದಿಗೆ ಹರಿದು ಬರುವ ನೀರು 2005ರಲ್ಲಿ ಸಂಭವಿಸಿದ ...

Vijaya Karnataka 7 Aug 2019, 5:00 am
ಕಾಗವಾಡ : ಭಾರಿ ಮಳೆಯಿಂದ ಕೃಷ್ಣಾ ನದಿಗೆ ಹರಿದು ಬರುವ ನೀರು 2005ರಲ್ಲಿ ಸಂಭವಿಸಿದ ಪರಿಸ್ಥಿತಿ ಮೀರಿಸತೊಡಗಿದೆ. ಇಷ್ಟಾದರೂ ಮೂಲ ಸ್ಥಳ ಬಿಡಲೊಪ್ಪದ ನದಿ ತೀರದ ಮಂಗಾವತಿ, ಜುಗೂಳ, ಶಹಾಪುರ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತಗೊಳ್ಳದಿದ್ದಲ್ಲಿ ಸೈನಿಕರನ್ನು ಬಳಸಿ ಸ್ಥಳಾಂತರಿಸಲಾಗುವುದು ಎಂಬ ಎಚ್ಚರಿಕೆಯನ್ನು ಧ್ವನಿವರ್ಧಕ ಮುಖಾಂತರ ನೀಡಲಾಗುತ್ತಿದೆ.
Vijaya Karnataka Web BEL-06 KAGWAD 5 NEWS PHOTO


ಮಂಗಳವಾರ ಬೆಳಗ್ಗೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಸಂಜೆ ವರೆಗೆ ಜುಗೂಳ-ಮಂಗಾವತಿ ಮಧ್ಯದ ಸಂಪರ್ಕ ಕಡಿತಗೊಂಡಿದ್ದು, ಜುಗೂಳ ಗ್ರಾಮದಲ್ಲಿ ನೀರು ನುಗ್ಗಿದೆ.

ಮಂಗಾವತಿ ಗ್ರಾಮ ಸಂಪೂರ್ಣ ನಡುಗಡ್ಡೆಯಾಗಿದೆ. ಇಲ್ಲಿಯ ಜನರನ್ನು, ಜಾನುವಾರಗಳನ್ನು ರಕ್ಷಿಸಲು 70 ಸೇನಾಪಡೆಯವರು, 40 ಎಸ್‌ಡಿಆರ್‌ಎಫ್‌ ಸೈನಿಕರು, ಪೊಲೀಸ್‌ ಇಲಾಖೆಯ ಸಿಬ್ಬಂದಿ, 5 ದೋಣಿಗಳನ್ನು ಬಳಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಎಲ್ಲ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಜುಗೂಳ ಗ್ರಾಮದಲ್ಲಿ ಉಳಿದು ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

ಏತನ್ಮಧ್ಯೆ ಕಾಗವಾಡ ಮತಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಮಂಗಳವಾರ ಬೆಳಗ್ಗೆಯಿಂದ ಕಾಗವಾಡ ಕ್ಷೇತ್ರ ವ್ಯಾಪ್ತಿಯ ಬಣಜವಾಡ, ಕೃಷ್ಣಾ-ಕಿತ್ತೂರ, ಉಗಾರ ಖುರ್ದ, ಕುಸನಾಳ, ಮೊಳವಾಡ, ಉಗಾರ ಬುದ್ರುಕ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರಿಗೆ ಸಾಂತ್ವನ ಹೇಳಿದರು. ಆಶ್ರಯ ಕೇಂದ್ರಗಳಿಗೂ ಭೇಟಿ ನೀಡಿ, ಈ ಸಂಕಟ ಸಮಯದಲ್ಲಿ ಹೊರ ಬಂದು ಸಮಸ್ಯೆಯಲ್ಲಿರುವ ಜನರನ್ನು ರಕ್ಷಿಸಲು ತಮ್ಮ ಕಾರ್ಯಕರ್ತರನ್ನು ಅಹ್ವಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ