ಆ್ಯಪ್ನಗರ

ಶ್ರದ್ಧಾಕೇಂದ್ರಗಳಿಗೆ ಕಸದ ಡಬ್ಬಿ ವಿತರಣೆ

ದೊಡವಾಡ: ಗ್ರಾಮದೇವಿ ದೇವಸ್ಥಾನ ಸೇರಿದಂತೆ ಗ್ರಾಮದ ...

Vijaya Karnataka 14 Feb 2020, 5:00 am
ದೊಡವಾಡ: ಗ್ರಾಮದೇವಿ ದೇವಸ್ಥಾನ ಸೇರಿದಂತೆ ಗ್ರಾಮದ 12 ಪ್ರಮುಖ ದೇವಸ್ಥಾನಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಸ ಸಂಗ್ರಹಣೆಯ ಡಬ್ಬಿಗಳನ್ನು ವಿತರಿಸಲಾಯಿತು.
Vijaya Karnataka Web 13DWDP1_53
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ದೊಡವಾಡ ಗ್ರಾಮದ ಶ್ರದ್ಧಾ ಕೇಂದ್ರಗಳಿಗೆ ಕಸ ಸಂಗ್ರಹಣೆ ಡಬ್ಬಿಗಳನ್ನು ವಿತರಿಸಲಾಯಿತು.


ದೇವಸ್ಥಾನಗಳ ಸೇವಾ ಸಮಿತಿಯವರ ಕಸ ಸಂಗ್ರಹಣೆಯ ಡಬ್ಬಿಗಳನ್ನು ವಿತರಿಸಿ ಮಾತನಾಡಿದ ಯೋಜನೆಯ ಜಿಲ್ಲಾನಿರ್ದೇಶಕ ಶೀನಪ್ಪ, ಯೋಜನೆಯ ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿರಾಜ್ಯದ ಸುಮಾರು 10 ಸಾವಿರ ಶ್ರದ್ಧಾಕೇಂದ್ರಗಳಿಗೆ ಕಸ ಸಂಗ್ರಹಣೆಯ ಡಬ್ಬಿಗಳನ್ನು ವಿತರಿಸಲಾಗಿದೆ. 8 ಲಕ್ಷ ರೂ. ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ 750 ಧಾರ್ಮಿಕ ಕೇಂದ್ರಗಳಿಗೆ ಡಬ್ಬಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ತಾಪಂ ಸದಸ್ಯ ಸಂಗಯ್ಯ ದಾಭಿಮಠ, ಗ್ರಾಪಂ ಸದಸ್ಯರಾದ ಯಮನಪ್ಪ ಅಟಗಲ್ಲ, ಸಿದ್ದಪ್ಪ ಕರಿಗಾರ ಪ್ರಮುಖರಾದ ಬಸವಂತ ಜಮನೂರ, ಬಸಪ್ಪ ಕಡದೊಳ್ಳಿ, ಅನಿಲ ಬಡಿಗೇರ, ರುದ್ರಪ್ಪ ಹಾವೇರಿ, ಜ್ಞಾನೇಶ್ವರ ಕಾಳಿ, ಮೂಗಪ್ಪ ಕೆಂಚರಾಮಹಾಳ, ಹನಮಂತ ಮುದೆನ್ನವರ, ರುದ್ರಪ್ಪ ಕಂಬಾರ ಮತ್ತಿತರರು ಇದ್ದರು. ತಾಲೂಕು ಯೋಜನಾಧಿಕಾರಿ ಕೆ. ಪುರುಷೋತ್ತಮ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ