ಆ್ಯಪ್ನಗರ

ಸಮ್ಮಿಶ್ರ ಸರಕಾರದ ನೀತಿಯಿಂದ ಶೈಕ್ಷ ಣಿಕ ಚಟುವಟಿಕೆಗಳಿಗೆ ಅಡ್ಡಿ

ಹುಕ್ಕೇರಿ : ಶಿಕ್ಷ ಣ ಇಲಾಖೆಗೆ 6 ತಿಂಗಳಿಂದ ಸಚಿವರೇ ಇಲ್ಲದಿರುವುದರಿಂದ ಶಿಕ್ಷ ಣ ಇಲಾಖೆಯ ಕೆಲಸಗಳಿಗೆ ...

Vijaya Karnataka 25 Feb 2019, 5:00 am
ಹುಕ್ಕೇರಿ : ಶಿಕ್ಷ ಣ ಇಲಾಖೆಗೆ 6 ತಿಂಗಳಿಂದ ಸಚಿವರೇ ಇಲ್ಲದಿರುವುದರಿಂದ ಶಿಕ್ಷ ಣ ಇಲಾಖೆಯ ಕೆಲಸಗಳಿಗೆ ಅಡ್ಡಿಯಾಗಿದೆ. ರಾಜ್ಯದಲ್ಲಿ ಶಿಕ್ಷ ಣ ಸಚಿವರೇ ಇಲ್ಲದಿರುವುದಕ್ಕೆ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರ ನಾಚಿಕೆ ಪಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಎಲ್‌.ವಿ.ಪಾಟೀಲ ಹೇಳಿದರು.
Vijaya Karnataka Web disruption for aducational activities by the coalition government policy
ಸಮ್ಮಿಶ್ರ ಸರಕಾರದ ನೀತಿಯಿಂದ ಶೈಕ್ಷ ಣಿಕ ಚಟುವಟಿಕೆಗಳಿಗೆ ಅಡ್ಡಿ


ತಾಲೂಕಿನ ನಿಡಸೋಸಿಯಲ್ಲಿ ಹುಕ್ಕೇರಿ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಸರಕಾರದ ಈ ಕ್ರಮದಿಂದ ಶಿಕ್ಷ ಣ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ತಕ್ಷ ಣ ಶಿಕ್ಷ ಣ ಇಲಾಖೆಗೆ ಸಮರ್ಥ ಸಚಿವರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದರು.

ಕನ್ನಡ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಮಕ್ಕಳ ಶಿಕ್ಷ ಣ ಹಕ್ಕಿಗೆ ಚ್ಯುತಿ ತರುತ್ತಿರುವುದು ಖೇದಕರ ಸಂಗತಿ. ಕಲಿಕೆಗೆ ಬೇಕಾಗಿರುವ ಪೂರ್ಣ ಪ್ರಮಾಣದ ವ್ಯವಸ್ಥೆ ಇಲ್ಲದಿರುವುದಕ್ಕೆ ಇಂದಿನ ಸರಕಾರವೇ ಕಾರಣ. ಮೈತ್ರಿ ಸರಕಾರ ಕನ್ನಡ ಶಾಲೆಗಳನ್ನು ನಿರ್ಲಕ್ಷಿಸುತ್ತಿದೆ. ಹಳೆಯ ಶಿಕ್ಷ ಣ ಪದ್ಧತಿ ಮುಂದುವರಿಸಬೇಕು.

ಪ್ರಾಥಮಿಕ ಶಿಕ್ಷ ಣವನ್ನು ರಾಷ್ಟ್ರೀಕರಣಗೊಳಿಸಬೇಕು. ಸರಕಾರಿ ಶಾಲೆಗಳನ್ನು ತುರ್ತಾಗಿ ಸುಧಾರಣೆಗೊಳಿಸಬೇಕು. ಕನ್ನಡ ಸಾಹಿತ್ಯದ ಪ್ರಮುಖ ಮೌಲಿಕ ಕೃತಿಗಳನ್ನು ಡಿಜಿಟಲೀಕರಣಗೊಳಿಸಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಒದಗಿಸದೇ ರಾಜ್ಯ ವಿಭಜನೆಯ ಕೂಗಿಗೆ ಆಸ್ಪದೆ ನೀಡಿದೆ. ಇದು ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ