ಆ್ಯಪ್ನಗರ

ಸಿನಿಮಾ ಮನರಂಜನೆಗೆ ಸೀಮಿತ ಆಗದಿರಲಿ

ಸವದತ್ತಿ: ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿರದೇ ಪ್ರೇಕ್ಷಕನನ್ನು ...

Vijaya Karnataka 9 Oct 2019, 5:00 am
ಸವದತ್ತಿ: ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿರದೇ ಪ್ರೇಕ್ಷಕನನ್ನು ಚಿಂತನೆಗೆ ಹಚ್ಚುವಂತಿರಬೇಕು ಎಂದು ಚಲನಚಿತ್ರ ನಿರ್ದೇಶಕ ಉಮೇಶ್‌ ಬಡಿಗೇರ ಹೇಳಿದರು.
Vijaya Karnataka Web 8SDT4_53


ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌.ವಿ.ಎಸ್‌. ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಏರ್ಪಡಿಸಿದ ಬೆಳಕಿನ ಕನ್ನಡಿ ಸಿನಿಮಾ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಬೆಳಕಿನ ಕನ್ನಡಿ ಸಿನಿಮಾ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದ್ದು, ಸಮಾಜದಲ್ಲಿಬೇರೂರಿರುವ ಆರ್ಥಿಕ ಸಮಸ್ಯೆ, ಮಹಿಳೆಯರ ಶೋಷಣೆ, ಭ್ರಷ್ಟ ವ್ಯವಸ್ಥೆ, ಕೆಟ್ಟ ರಾಜಕೀಯ, ಕೆಲವರ ಕಾಮುಕತನದಂಥ ಘಟನೆಗಳನ್ನು ನಿರೂಪಿಸುತ್ತದೆ. ಇಲ್ಲಿಸ್ಥಳೀಯ ಭಾಷೆಯನ್ನು ಅಳವಡಿಸಿರುವುದು ಸಿನಿಮಾದ ಮುಖ್ಯ ಜೀವಾಳವಾಗಿದೆ ಎಂದರು.

ಪ್ರೊ. ಕೆ.ರಾಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎನ್‌.ಆರ್‌. ಸವತೀಕಾರ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಎಫ್‌ ಬದಾಮಿ, ಚಂದ್ರಶೇಖರ ರಾಯರ, ಝಾಕೀರ ನದಾಫ್‌, ಗೋಪಾಲ ಪಾಸಲಕರ, ಅನಿಲ ಕಗದಾಳ, ಮಯೂರ ಶಿಂಧೆ, ರಂಗ ಆರಾಧನಾ ಸಾಂಸ್ಕೃತಿಕ ಸಂಸ್ಥೆಯ ಪದಾಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ದೀಪಾ ಶಿರಕೋಳ ಪ್ರಾರ್ಥಿಸಿದರು. ಅಶ್ವಿನಿ ಹೆಬಸೂರ ಸ್ವಾಗತಿಸಿದರು. ಆರತಿ ದೊಡ್ಡಮನಿ ನಿರೂಪಿಸಿದರು. ಶೋಭಾ ಕೊಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ