ಆ್ಯಪ್ನಗರ

ಸಿಂಗಲ್‌ಫೇಸ್‌ ವಿದ್ಯುತ್‌ ಪಂಪ್‌ಸೆಟ್‌ ಮೋಟಾರ್‌ಗೆ ಬಳಸದಿರಿ

ರಾಯಬಾಗ: ಗ್ರಾಮೀಣ ಭಾಗಗಳ ತೋಟಪಟ್ಟಿಗಳಲ್ಲಿ ನೀಡುವ (ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ) ಸಿಂಗಲ್‌ ಫೇಸ್‌ ವಿದ್ಯುತ್‌ನ್ನು ಪಂಪ್‌ಸೆಟ್‌ ಮೋಟಾರ್‌ಗೆ ...

Vijaya Karnataka 21 Jul 2019, 5:00 am
ರಾಯಬಾಗ : ಗ್ರಾಮೀಣ ಭಾಗಗಳ ತೋಟಪಟ್ಟಿಗಳಲ್ಲಿ ನೀಡುವ (ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ) ಸಿಂಗಲ್‌ ಫೇಸ್‌ ವಿದ್ಯುತ್‌ನ್ನು ಪಂಪ್‌ಸೆಟ್‌ ಮೋಟಾರ್‌ಗೆ ಉಪಯೋಗಿಸಬಾರದು. ಇದರಿಂದ ವಿದ್ಯುತ್‌ ವ್ಯತ್ಯಯವಾಗುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ರಾಯಬಾಗ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ವಾಕ್ಪಟೆ ತಿಳಿಸಿದರು.
Vijaya Karnataka Web BEL-20RAIBAG3PHOTO


ಪಟ್ಟಣದ ಹೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಹಕರ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಸಂಪರ್ಕ ನೋಂದಣಿ, ಹೆಸರು ಬದಲಾವಣೆ, ಹೆಚ್ಚುವರಿ ಭಾರ, ಜಕಾತಿ ಬದಲಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿ 3ನೇ ಶನಿವಾರ ಗ್ರಾಹಕರ ಸಂವಾದ ಮತ್ತು ಕುಂದುಕೊರತೆ ಸಭೆ ನಡೆಸಲಾಗುವುದು. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದರು.

ರಾಯಬಾಗ ಹೆಸ್ಕಾಂ ಎಇಇ ವಿಜಯಕುಮಾರ ಚವ್ಹಾಣ, ಎಂ.ಡಿ. ಪಾಟೀಲ, ಎಸ್‌.ಕೆ. ಕನಕರೆಡ್ಡಿ, ಎನ್‌.ಬಿ. ಅವಟೆ, ಸಂತೋಷ ಮಣ್ಣಿಕೇರಿ, ರೇವಪ್ಪ ಹುಕ್ಕೇರಿ, ಬಸಪ್ಪ ಡಬನ್ನವರ, ಅಣ್ಣಪ್ಪ ಬಡೋದೆ, ಮಹಾದೇವ ಹಾರೂಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ