ಆ್ಯಪ್ನಗರ

ಧರ್ಮಸ್ಥಳ ಸಂಸ್ಥೆಯಿಂದ ಕುಡಿಯುವ ನೀರು ಪೂರೈಕೆ

ಚಿಕ್ಕೋಡಿ: ತಾಲೂಕಿನ ಕರೋಶಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಉಚಿತ ವಿತರಣಾ ಕಾರ್ಯಕ್ಕೆ ಯೋಜನೆಯ ...

Vijaya Karnataka 3 May 2019, 5:00 am
ಚಿಕ್ಕೋಡಿ : ತಾಲೂಕಿನ ಕರೋಶಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಉಚಿತ ವಿತರಣಾ ಕಾರ್ಯಕ್ಕೆ ಯೋಜನೆಯ ಜಿಲ್ಲಾ ನಿರ್ದೇಶಕ ಶೀನಪ್ಪ ಮೂಲ್ಯ ಚಾಲನೆ ನೀಡಿದರು.
Vijaya Karnataka Web BEL-2CKD3


ನಂತರ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಬೇಡಿಕೆ ಮನಗಂಡು ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿರುವ ಈ ಭಾಗದಲ್ಲಿ ಸಂಸ್ಥೆಯ ವತಿಯಿಂದ ಒಂದು ತಿಂಗಳ ಕಾಲ ನೀರು ವಿತರಿಸಲಾಗುತ್ತಿದೆ. ನೀರು ಸರಬರಾಜಿಗೆ ಒಟ್ಟು 1.44 ಲಕ್ಷ ರೂ. ಮಂಜೂರು ಮಾಡಲಾಗಿದೆ.

ಈ ಕಾರ್ಯಕ್ರಮದಡಿ ತಾಲೂಕಿನ ಕರೋಶಿ, ಬಂಬಲವಾಡ, ಕಮತೆನಟ್ಟಿ, ತೋರಣಹಳ್ಳಿ, ಬಿದರಳ್ಳಿ, ಹತ್ತರವಾಟ, ಮಾಗನೂರು, ಮುಗಳಿ, ಜೈನಾಪುರ, ಕುಂಗಟೋಳಿ, ಬೆಳಕೂಡ ಆಯ್ದ ಬರ ಪೀಡಿತ ಪ್ರದೇಶಗಳಿಗೆ ದಿನಕ್ಕೆ 8 ರಂತೆ ಒಂದು ತಿಂಗಳ ಕಾಲ ಒಟ್ಟು 240 ಟ್ಯಾಂಕರ್‌ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಲಾಗುವುದು.

ಜಿಪಂ ಸದಸ್ಯೆ ಲಕ್ಷ್ಮೀ ಕುರಬರ, ತಾಪಂ ಸದಸ್ಯ ನಸೀಮಾ ಭಾನು, ಗ್ರಾಪಂ ಉಪಾಧ್ಯಕ್ಷ ಸಾವಿತ್ರಿ ಜಯದೆ, ವಿಜಯ ಕೊಟೆವಾಲೆ, ಖುತೆಜಾ ಮುಲ್ಲಾ, ಊರಿನ ಗಣ್ಯರು, ಮೇಲ್ವಿಚಾರಕ ನವೀನ್‌ ನಾಯ್ಕ ಹಾಗೂ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ